ತಾಯಿ ಪ್ರೀತಿ
ಶಿಖರವನ್ನೇರಬೇಕೆಂದಾಗ ಕೆಲವರೆಲ್ಲ
ಗಹ ಗಹಿಸಿ ನಕ್ಕರು, ಹಂಗಿಸಿದರು,
ಅವಳು ಮಾತ್ರ ನಾ ಹತ್ತಲು ಬೇಕಾದ
ಸಿದ್ದತೆ ಮಾಡುತ್ತಿದ್ದಳು..
ಶಿಖರವನ್ನೇರುತ್ತಿರುವಾಗ ಕೆಲವರೆಲ್ಲ
ಕಲ್ಲು ಬಿಸಾಡಿದರು, ಹುಚ್ಚನೆಂದರು
ಅವಳು ಮಾತ್ರ ದೇವರಲ್ಲಿ
ನನಗಾಗಿ ಪ್ರಾರ್ಥಿಸುತ್ತಿದ್ದಳು..
ಇನ್ನೇನು ಶಿಖರವನ್ನೇರಬೇಕು ಎಲ್ಲರೂ
ನನ್ನನ್ನು ಅವರ ಆತ್ಮೀಯನಂತೆ ಕಾಣುತ್ತಿದ್ದರು
ಅವಳು ಮಾತ್ರ ಉಟ ನೀರು ಬಿಟ್ಟು
ಆಸೆಗಣ್ಣಲ್ಲಿ ನನಗಾಗಿ ಕಾಯುತ್ತಿದ್ದಳು..
ಶಿಖರದ ತುತ್ತ ತುದಿಯನ್ನೇರಿದೆ
ಊಹಿಸಲಸಾಧ್ಯವಾದ ಜನರನ್ನೆಲ್ಲ ಕಂಡೆನು
ಆಕೆ ಮಾತ್ರ "ಇಳಿಯುವಾಗ ಜಾಗೃತೆ ಮಗನೆ"
ಎಂದು ಕಿವಿ ಮಾತು ಹೇಳುತ್ತಿದ್ದಳು..
- ಅಕ್ಷತ
21 Dec 2019, 07:30 pm
Download App from Playstore: