"ಅಹಂಕಾರದ ಕೇಡು"

"ಅಹಂಕಾರದ ಕೇಡು"

ತರವೆ ನಿನಗೆ ಅಹಂಕಾರ ಗರ್ವ
ಯೌವನದ ಸೊಬಗು ಮಾನಸ ಪರ್ವ
ಮುಂಗುರುಳು ಚೆಲುವ ಕಣ್ಣು ಚಿತ್ತಾಕರ್ಷಕ
ಬೆಳ್ಮುಗಿಲ ಚೆಲುವ ಮೈಮಾಟ ಮೋಹಕ.

ಚೆಲುವನರಸಿ ಮಧುವನೀರಿ ಹಾರಿಹವು ಎಚ್ಚರ
ಕ್ಷಣಿಕ ತೃಪ್ತಿ ಮೋಹಕ ಮನದಾಚೆ ನೋವು ನಿರಂತರ
ಸುತ್ತಿ ಸುತ್ತಿ ಚಿತ್ತಭ್ರಮಿಸಿ ಮನವ ತಣಿಸೆ ಕಾತರ
ಒಲವ ಪಡೆವ ಆಸೆಕಂಗಳ ಮನದ ಚಿತ್ತಾರ.

ಓ ಮಾನಿನಿಯೇ ಅಹಂಕಾರ ಪಡದಿರು
ಇದ್ದಾಗ ಇಲ್ಲ ಸಲ್ಲದ ಗೌರವ ಸನ್ಮಾನ
ಕಳೆದಾಗ ಮಾತು ನೀರವ ಮೌನ ಸ್ಮಶಾನ
ಸತ್ತಾಗ ...!!!???

ಸ್ನಾನವ ಮಾಡಿಸಿ ಶ್ವೇತಾಂಬರ ಹೊದಿಸಿ
ಕೈತುಂಬ ಬಳೆಯ ತೊಡಿಸಿ
ಹಣೆಗೆ ಕುಂಕುಮ ಚಂದನವ ಲೇಪಿಸಿ
ಮುಡಿ ತುಂಬ ಹೂವ ಮುಡಿಸಿ
ಹೂತಾಗ...!!!!????

ಅದುವೆ ನೋಡು ನಮಗೆ ಶಾಶ್ವತ ತಾಣ
ಗೆದ್ದಲುಗಳಿಗೆ ಸಂಭ್ರಮ ರಸದೌತಣ
ಸೌಂದರ್ಯದಿಂದ ಬಂದಾ ಕೇಡು
ಮಣ್ಣಲ್ಲಿ ಮಣ್ಣಾಯಿತು ನೋಡು.

By- GP

- gp

21 Dec 2019, 10:12 pm
Download App from Playstore: