ನೀನೆಂಬ ನೆನಪು

ಬುಡ ಸಮೇತ ಕಿತ್ತ
ನಿನ್ನ ನೆನಪಿನ ಬುತ್ತಿ
ಎಸೆದೆನು ಸುತ್ತಮುತ್ತ
ಈಗೆಲ್ಲ ಅದು ಚಿಗುರುತ್ತ
ಎತ್ತುತಿಹುದು ತನ್ನಯ ಕತ್ತ
ಏನುಮಾಡಲಾಗದೆ ನಾ ಇತ್ತ
ಕಳೆದುಕೊಂಡಿಹೆನು ಎನ್ನ ಚಿತ್ತ
ಮರೆಯಲಾಗದೆ ನಾನು ನಿನ್ನ ಅತ್ತ
ನಿನ್ನ ನೆನಪಲಿ ಇರಲಾಗದೆಯೂ ಇತ್ತ
ನಾನೀಗ ಹೋಗಿ ಇರುವುದಾದರೂ ಎತ್ತ
ನೀನೆಂಬ ಪ್ರಪಂಚವನ್ನು ನಾ ಮರೆಯುತ್ತ..

- ಅಕ್ಷತ

25 Dec 2019, 11:59 pm
Download App from Playstore: