ಕನಸಿನ ಮರೆಯಲಿ
ಕಾಣದ ಕನಸಿನ ಮರೆಯಲಿ,
ತುಂಬಿತು ಪ್ರೀತಿಯ ಭಾವ,
ಯಾವುದೂ ಪರಿವೆಯಿಲ್ಲದೆ ಅಲ್ಲಲ್ಲಿ,
ಮಾಡಿದೆ ಪ್ರೀತಿಯ ಗೆಳೆತನ.
ಹೃದಯದ ಅಂಚಿನ ಓಲೆಯಲಿ,
ಮೂಡಿತ್ತು ಪ್ರೀತಿಯ ಚಿತ್ತಾರವ,
ಜಗತ್ತಿನ ಪರಿವೆಯಿಲ್ಲದೆ ಚಿತ್ತಾರದಲ್ಲಿ,
ನಡೆದಿದೆ ಪ್ರೀತಿಯಂಗಳ ಹುಡುಕುವ ಕೆಲಸವ.
ಕಣ್ಗಳ ಅಂಚಿನಿಂದ ಪ್ರೀತಿಯಂಗಳ ಹುಡುಕುವಲ್ಲಿ,
ನಡೆದಿತ್ತು ನನ್ನಯ ಪ್ರೀತಿಯ ಚಿತ್ತಾರ ಬಿಡಿಸುವ ಕೆಲಸವ,
ಲೋಕದ ಪರಿವೆಯಿಲ್ಲದೆ ಪ್ರೀತಿಯಂಗಳದಲ್ಲಿ,
ಕಾಣುತ್ತಿತ್ತು ಮೂಡಿಬಂದ ಪ್ರೀತಿಯ ಚಿತ್ರಣವ.
ಪ್ರೀತಿಯಂಗಳವನ್ನಿಟ್ಟು,ಮನಸ್ಸಿನಂಗಳದಲ್ಲಿ,
ಹುಡುಕುತಿತ್ತು ಈ ಮನ ಯಾವುದೋ ಜೀವವ,
ತನ್ನದೆ ಪರಿವೆಯಿಲ್ಲದೆ ಆ ಜೀವವ ಇರಿಸಿತ್ತು ತನ್ನ ಹೃದಯಾಂತರಾಳದಲ್ಲಿ,
ಸಾಗುತ್ತಿದೆ ಮೂಡಿಬಂದ ಈ ಪ್ರೀತಿಯ ಚಿತ್ತಾರ ಬಿಡಿಸುವ ಕೆಲಸವ.
- Pradeep Malabadi
27 Dec 2019, 12:54 pm
Download App from Playstore: