ಬಾರದು ಮನಸ್ಸು, ಕಾಣದ ಊರು...

ಸಿಟ್ಟು ಎಂಬ ಕಿಚ್ಚಿಗೆ ನಲುಗಿ ನೊಂದಿದೆ
ಎದೆಯೊಳಗಿನ ಚಿಗುರಿದ ಚಿಗುರು
ಹೃದಯದ ಅರಮನೆಯ ನಲಿದಾಡುವ
ಮನಸ್ಸು ಬಂದಿಯಾದಂತಿದೆ ಮೌನದೊಳಗೆ...

ನೂರಾರು ದಿನಗಳಿಂದ ಕಟ್ಟಿದ ಕನಸಿಗೆ
ಬಿದ್ದಿದೆ ಯಾರದೋ ಕಣ್ಣು, ತಟ್ಟಿದೆ ಶಾಪ
ಮಾಡದ ಸಾಲಕ್ಕೆ ಕಟ್ಟಬೇಕೇಕೆ ಬಡ್ಡಿ
ನಾನೇ ಇಲ್ಲದ ಮೇಲೆ ಉತ್ತರವೇಕೆ ಪ್ರಶ್ನೆಗೆ...

ಕೋಪ -ತಾಪ ಇಲ್ಲ ಈ ಮೌನವಾದ ಮನಸ್ಸಿಗೆ
ಕಾಲಿಡುತ್ತಿರುವೆ ಕಾಣದ ಊರಿಗೆ ಬದುಕಿನ ಅಲೆಯಂಚಿಗೆ ನಿಲ್ಲದಹಾಗೆ...

ನಿರಾಸೆಯ ಕಗ್ಗತ್ತಲ್ಲಲ್ಲಿ ಕಾಣದ ಆಶಾಕಿರಣದ
ಬೆಳಕಿಗೆ ಕಾಯುತಿಹ ಮನಕೆ ಗುರಿ ತಲಪುವ ಛಲವೊಂದೆ ಆಧಾರವಿಗ........

- yogi

27 Dec 2019, 01:43 pm
Download App from Playstore: