ಅವನು

ಅವನು
---------
ನಲಿವುಗಳ ಆಚೆಯಲಿ
ನಾವಿಡುವ ಹೆಜ್ಜೆಗಳಲಿ
ಶಾಂತಿಧೂತನ ಪಾತ್ರ .

ಅವನೆತ್ತರಕೆ ಬೆಳೆಯಲು
ಅವನಿಟ್ಟ ಕಸ್ತೂರಿ
ಮೂಸಿಸಲು ನಮಗೆ ಸಮಯವಿಲ್ಲ.

ಕಿರುನಾಲಿಗೆಗೊಂದು
ಹಿರಿನಾಲಿಗೆಯ ಆಶ್ರಯ
ದೇವನೊಲುಮೆಯ ಕೀರ್ತಿ.

ಸಂತೋಷವ ಗಳಿಸಿಡಲು
ಮುಪ್ಪು ಆವರಿಸುವ ಮುನ್ನ
ಒಳಹೊಕ್ಕು ನೋಡೊಮ್ಮೆ ಅವನ.

ಅವನಂದುಕೊಂಡದ್ದು
ನಾವಿಂದು ಕೊಂಡದ್ದು
ಎರಡೂ ಒಂದೇ.

-- ಸುರೇಶ ಜಕಾತಿ.ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

05 Jan 2020, 09:46 am
Download App from Playstore: