ಹೈಕುಗಳು

ಹೈಕು
---------
೧೨೧.
ಸಂದೀಘ್ದ ಮನಸ್ಸಿನಲ್ಲಿ
ಸವಾಲೆತ್ತುವ ಪ್ರಶ್ನೆ
ವೈರಾಗ್ಯ.

೧೨೨.
ಬ್ರಹತ್ ಶಿಲಾಶಾನದ
ಬಂಡೆಯೂ ಉತ್ತರ ನೀಡುವುದು
'ಬರುವಾಗ ಬೆತ್ತಲೆ
ಹೋಗುವಾಗಲು ಬೆತ್ತಲೆ
ಬಂದು ಹೋಗುವ ನಡುವೆ
ತುಂಬಿಸಿಕೊಳ್ಳದಿರಿ ಕತ್ತಲೆ.'

೧೨೩.
ಯಾವುದೇ ಬಂಧನಕ್ಕೆ
ಒಳಪಡದ ದೇವರು ಬಾಹುಬಲಿ.

೧೨೪.
ಗೊಮ್ಮಟನ
ಕಮ್ಮಟದಲ್ಲಿ
ಮಾಯೆಗೆ ಪ್ರವೇಶವಿಲ್ಲ.

೧೨೫.
ನನಗೆ ನಾನೆ ಗುರು
ನನಗೆ ನಾನೆ ದೇವರು
ಸಾರುವುದು ಗೊಮ್ಮಟನ ಕಲ್ಲು.

೧೨೬.
ಗೆದ್ದು ಸೋತವನು ಭರತ
ಸೋತು ಗೆದ್ದವನು ಬಾಹುಬಲಿ.

೧೨೭.
ಏಕ ಶಿಲಾ ಶಾಸನದಲ್ಲಿ
ಮೂಡಿಬಂದುದೆಲ್ಲ
ಖಾಲಿಯಾದ ಈ ಜೀವನ.

೧೨೮.
'ಎದ್ದು ನಿಂತರೆ
ಜಗವೇ ಬಾಗುವುದು'
ಸಾರುವನಿದನು ಗೊಮ್ಮಟನು.

೧೨೯.
ಮೋಕ್ಷದ ದಾರಿಗೆ
ಚಂದ್ರಗುಪ್ತ ಬಸದಿಯೇ ಸಾಕ್ಷಿ.

೧೩೦.
ಬೆಟ್ಟ ದತ್ತಿದಾಗಲೂ
ಸಿಕ್ಕುವುದು
ಬೆತ್ತಲೆಯ ಮೂರ್ತಿ.


‌ --- ಸುರೇಶ ಜಕಾತಿ.ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

06 Jan 2020, 10:10 am
Download App from Playstore: