ರಾಧೇಯೋರ್ವಳಿರುವಳು ಇಲ್ಲಿ..

ರಾಧೇಯೋರ್ವಳಿರುವಳು ಇಲ್ಲಿ
ಕಾಯುತಲಿ ಮಾಧವನ ದಾರಿ
ಅವನ ನಾಮ ಸ್ಮರಣೆಯಲ್ಲಿ ಮರೆತಿಹಳು
ಉಸಿರ ಬಿಸಿಯ ಗಾಳಿ.

ಮೇಘಶ್ಯಾಮನೆಲ್ಲಿರುವನೋ ತನ್ನನುಡಿಕಿ
ಎಂದಿಗೆ ಬರುವನೋ ತಿಳಿಯದೇನೆ ರಾಧೆ
ಅವನ ಗಾದೆ ಪ್ರೇಮದಿಂದ ಹಾಡುತಿಹಳು
ಹೊಸ್ತಿಲಿಗೆ ಹೇಳುತಿಹಳು.

ಇಟ್ಟ ಸಿಂಧೂರ ಮುಡಿದ ಮಂದಾರ
ಮಾಸದಿರಲಿ ಬಾಡದಿರಲಿ ನನ ಕೃಷ್ಣನ
ಕಾಣುವವರೆಗೂ ಅವನ ನೆರಳು ನನ್ನ
ಸೋಕುವವರೆಗೂ.

ತುಟಿಯ ಕೆಂಪು ಕಪ್ಪು ಕಾಡಿಗೆ ಕರಗದಿರಲಿ
ದೀಪ ಆರದಿರಲಿ ಕನಸು ಕಮರದಿರಲಿ ತಾವರೆ ಬಿರಿಯದಿರಲಿ ಕಮಲ ನಯನಾ ನಿನ್ನ ನೋಟಕೆ
ಸಿಲುಕಿ ನನ್ನ ಮನ ಮರೆಯದಿರಲಿ ನಿನ್ನನುಡಿಕಿ
ನನ್ನ ತೊರೆಯದಿರಲಿ.

- ಚುಕ್ಕಿ

08 Jan 2020, 03:36 pm
Download App from Playstore: