ರೈಲು ಬಂಡಿ

ರೈಲು ಬಂಡಿ
•••••••••••••••

ಚುಕು ಬುಕು ರೈಲು ಬಂದಿತ್ತನ್ನಾ
ಟಕ....ಟಕ....ಸದ್ದನು ಮಾಡಿತ್ತನ್ನಾ
ಪಂವ....ಪಂವ.....ಪೀಪಿಯ ಊದಿತ್ತಣ್ಣ
ಊರಿಂದೂರಿಗೆ ಸಾಗಿತ್ತನ್ನಾ.

ಜೋಡಿ ಕಬ್ಬಿಣದ ಹಳಿಯ ಮೇಲೆ
ಬೋಲ್ಟ್ ನು ಬಿಗಿದ ಕಂಬಿಯ ಮೇಲೆ
ಗುಂಡನೆ ಗಾಲಿಗಳುರುಳುತ ರೈಲು
ಬೊಂಗಾ ಹೊಗೆಯನು ಬಿಟ್ಟಿತ್ತಣ್ಣ.

ಗಡ... ಗಡ... ಸದ್ದದು ಹಳಿಯ ಮೇಲೆ
ಡಬ್ಬಿಗಳನೇಕ ವಯ್ಯಾರದಿಂದಲೆ
ಹರಿಯುವ ಹಾವಿನ ರಭಸವಣ್ಣ
ಅಂಕು ಡೊಂಕಾಗಿ ಸಾಗಿತ್ತಣ್ಣ.

ರೈಲಿನ ಒಳಗೆ ಹೊರಡುವೆನೆಂದರೆ
ಬಗೆ ಬಗೆ ತಿಂಡಿಯ ಮೋಜಣ್ಣ
ತಿನ್ನಲು ಬಾರಿ ಮಜವಣ್ಣ
ರೈಲಿನ ಪ್ರಯಾಣ ಖುಷಿಯಣ್ಣ.

ಚಲಿಸುವ ಗಿಡಗಳ ಕಿಟಕಿಯ ನೋಟ
ಒಳಗೆ ಇರುವುದು ಕುಡಿಯುವ ನೀರು
ಮೆತ್ತನೆ ಸೀಟು,ಶೌಚಾಲಯಗಳು
ಅಲ್ಲೇ ಇರುವವು ನೋಡಣ್ಣ.

ಕೈಯ ಮಾಡಿದರೆ ನಿಲ್ಲದು ರೈಲು
ಸೀಟಿಯ ಹೊಡೆದರೆ ಸದ್ದು ಕೇಳದು
ಕೆಂಪು ದ್ವಜ ಒಂದೇ ನಿಲ್ಲುವ ಬಾವುಟ
ಹಸಿರು ದ್ವಜ ತೋರಿ ಹೊರಡುವುದಣ್ಣ.

ಕುದುರೆಯಂತೆ ಬಲ ಓಡುವದಣ್ಣ
ಹಾವಿನ ಮಾಟದಿ ಹರಿಯುದಣ್ಣ
ಕಾಲಲಿ ಬಿದ್ದರೆ ತುಳಿಯುವದಣ್ಣಾ
ಟ್ರಾಫಿಕ್ ತೊಂದರೆ ತಡೆಯುವದಣ್ಣ.

ಕಲ್ಲಿದ್ದಲನ್ನು ತಿನ್ನುವುದಣ್ಣ
ವಿದ್ಯುತ್ತನ್ನು ಕುಡಿಯುವುದಣ್ಣ
ರೈಲಿನ ಒಳಗೆ ಟಿ.ವ್ಹಿ.ಯು ಇರುವುದು
ನೋಡುತ ಸಾಗಲು ಮಜವಣ್ಣ.

// ಸುರೇಶ ಜಕಾತಿ.ಜಮಖಂಡಿ//
8746086658.

- ಸುರೇಶ ಜಕಾತಿ.ಜಮಖಂಡಿ

12 Jan 2020, 09:35 am
Download App from Playstore: