ಚೆಲುವಿ ಚೆಲುವಿ..!

ಚಂದನದ ಗೊಂಬಿ ಅವಳು
ಬಂಧುರ ಬೆಡಗಿನವಳು
ಸಾವಿರದ ಕನಸುಗಳನೆಲ್ಲ
ಕಟ್ಟಿಕೊಟ್ಟವಳು ನನ್ನ ಚೆಲುವಿ..

ಕಣ್ಣ ಸನ್ನೆಯ ಮಾತುಗಳು
ಎದೆಯ ನಿನಾದಕೂ ಸ್ಪರ್ಶ
ಮಾತಿನ ಮಲ್ಲಿ,ಮಿಂಚು ಬಳ್ಳಿ
ಹುಣ್ಣಿವೆ ಚಂದ್ರನ ಜಾಡಿನವಳು..

ಕೆಂದುಟಿಯಲುಂಟು ಸುಧೆ
ನೀಳ ನಾಸಿಕವೊಂದು ಸಂಪಿಗೆ
ಬಾಳೆದಿಂಡಿನಂತೆ ಬಳುಕುವ
ಸೊಂಟದ ವೈಯ್ಯಾರಿ ಚೆಲುವಿ..

ನಸುನಗೆಯೇ ಅವಳೊಡವೆ
ಅವಳು ದೇವಲೋಕದ ಸಿರಿದೇವಿ
ಕಂಡಡೋನೆ ಎತಕೋ ಮುದ್ದು
ಪ್ರೀತಿಗಿಲ್ಲವೆ.? ಯಾವ ಮದ್ದು..

ಚೆಲುವಿ ನನ್ನ ಸೊಬಗಿನೊಡತಿ
ನನ್ನೆಲ್ಲ ಭಾವಗಳ ಕಾಪಿಟ್ಟು ಕಾಯ್ವ
ಮನದ ದೊರೆಸಾನಿ ನನ್ನಾಕೆ
ಅವಳೆ ನನ್ನ ಜೀವದ ಚೆಲುವಿ..

- ಲಕುಮಿಕಂದಮುಕುಂದ

17 Jan 2020, 12:37 am
Download App from Playstore: