ಬೆಂಗಳೂರು ಜೀವನ

ಹೊಟ್ಟೆ ಪಾಡಿಗಾಗಿ ನಗರ ಸೇರಿ,
ಕಾಲ್ ಸವಿಯೊವರೆಗೂ ಹುಡುಕಿ ಹುಡುಕಿ ಕೆಲ್ಸ ಗಿಟ್ಟಿಸಿಕೊಂಡು,
ನಾ ಮುಂದು ತಾ ಮುಂದು ಎಂದು ನಡೆಯುವವರ ನಡುವೆ ಮುಂದೊಂದಿನಕ್ಕಾಗಿ ನಡೆಯುತ್ತಿರುವೆನು
ಹೊತ್ತ ಕುಟುಂಬ ಜವಾಬ್ದಾರಿ, ನೋವು, ಆಸೆ ಆಕಾಂಕ್ಷೆಗಳನ್ನುಗಳನ್ನು ಮನದಲ್ಲಿ ಬಚ್ಚಿಟ್ಟು ,
ಈ ಮದ ಮತ್ಸರ ವೈಮನಸ್ಸುಗಳ ನಡುವೆ ಕಿರುನಗೆ ಬೀರಿ ಸಾಗುತಿರುವೆನು, ನನ್ನ ಅಂತರಂಗವ ಬಲ್ಲವರು ಯಾರಿಲ್ಲ ಇಲ್ಲಿ ಹೆಡೆ ಮುರಿ ಕಟ್ಟುವವರೆ ಸುತ್ತೆಲ್ಲಾ..

✍️ವೇಣು ಸಿ. ಎ✍️

- VenuCA

17 Jan 2020, 01:06 pm
Download App from Playstore: