ನನ್ನವಳು
ಬರೆಯಲೆಂದು ಕುಳಿತರೆ...
ಆಕೆಯದ್ದೆನೇನಪು. ...ಆಕೆಯದ್ದೆ ನಗು..
ಅವಳಿಗಾಗಿ ಹುಟ್ಟುವ ಪದಗಳು...
ಅದೇ ಗುಂಗಿನಲ್ಲಿ ಮತ್ತೆಲ್ಲದರ ಮರೆವು...
ನನ್ನವಳು ಮನಸೆಂಬ ಕೂಸಿಗೆ
ಕನಸುಗಳ ತುತ್ತನುಣಿಸುವವಳು
ನನ್ನವಳು ಕಡಲ ಬಿಳಿ ಬಿಳಿ ನೊರೆಯಂತೆ ನಾಜೂಕು
ಆದರೆ ಅವಳ ಪ್ರೇಮ ತೂಫಾನಿನಷ್ಟೇ ತೀವ್ರ!
ನನ್ನವಳ ರೂಪ ಇರುಳ
ಬಾನ ಬೆಳಗುವ ಪೂರ್ವ ಚಂದಿರ.
ಅವಳ ಹೃದಯ ನನ್ನ ಜೀವನದ
ಕಷ್ಟಗಳ ಮರೆಸೊ ಮಂದಿರ.
ನನ್ನವಳು ತಣ್ಣನೆಯ ತಂಗಾಳಿ
ಮಚ್ಚಿನಂತೆ ಹರಿತವಾದ ಸೌಂದರ್ಯ
ಕನಸ ಕುಸುರಿಯನ ಕಟ್ಟಿದಂತ ಕಣ್ಣಿನ ಮಾತು
DATTU
- Dattatreyabhat
19 Jan 2020, 08:38 am
Download App from Playstore: