ಅರಿವಾಗಲೇ ಇಲ್ಲ.
ಬಂಜೆಯೆಂದು ಅಣಕಿಸುವ
ಅವಳಿಗೆ ಅರಿವಾಗಲೇ ಇಲ್ಲ
ಮಗು ಇದ್ದು ಕೂಡ
ಮಗುವಿನ ಮಹತ್ವ
ಅನಾಥನೆಂದು ಅಣಕಿಸುವ
ಅವನಿಗೆ ಅರಿವಾಗಲೇ ಇಲ್ಲ
ಹೆತ್ತವರು ಇದ್ದು ಕೂಡ
ಹೆತ್ತವರ ಮಹತ್ವ
ಭಿಕ್ಷುಕನೆಂದು ಅಣಕಿಸುವ
ಅವನಿಗೆ ಅರಿವಾಗಲೇ ಇಲ್ಲ
ಮೈ ತುಂಬಾ ಸಾಲು ಇದ್ದು ಕೂಡ
ಬೇಡುವವನ ನೋವು
ಪರರ ಅಣಕಿಸುವ
ಅವನಿಗೆ ಅರಿವಾಗಲೇ ಇಲ್ಲ
ಪರರಂತೆ ತಾನು ಕೂಡ
ಬದುಕುತ್ತಿರುವುದು ಎಂದು
- ಅಕ್ಷತ
19 Jan 2020, 10:39 am
Download App from Playstore: