ಗಜಲ್( ಋಣ)

ಗಜಲ್ ( ಋಣ)
_______________

ದಿನ ಬಿಡದೇ ಸಾಗುತಿವೆ ನೆನಪುಗಳ ಪಯಣ
ನೀ ಬರದ ನೆನಪುಗಳು, ಕಡಿದ ಕಾಡುಗಳ ತೀರಿಸಲಾಗದ ಋಣ.

ಎದೆ ಅಳತೆಗೇನು ಸಾಟಿ ? ಬೇರೆ ಹೆಣ್ಣುಗಳಲಿ ನಾ ಕಾಣೆ
ನನ್ನ ನೆನಪಿಗೆ ನೀನೆ ಸರಿಸಾಟಿ ; ನನ್ನಲ್ಲಿರು ನೀ ದೇವರಾಣೆ.

ತೆರೆದ ಬಾಯ್ದೆಂಜಲವ ಮರೆತು,ಉಗಿ ನುಂಗುವ ತುಡಿತ
ನಾಕಕಿನ್ನೂ ನೂರು ಗೇನು ಸಾಗೋಣ ಬಾ ವಿರಸ ಮರೆತು.

ಸಂಬಂಧಗಳ ಎದೆಗೆ ತಾಗಿದ ಸ್ನೇಹ ಸಹವಾಸದ ಎಸಳು
ಹಿಡಿದು ಕಟ್ಟಿ ಹಾಕುವೆನು; ಅಂತರಂಗದಲ್ಲಿ ನೀ ನುಸುಳು.

ಮಾಮರದ ರೆಂಬೆಯಲಿ ಚಿಗುರು ಕಚ್ಚುವ ಕೋಗಿಲೆ
ನಿನ್ನಂತೆ ದನಿಯಿಂಪು; ಹೋಗಬೇಡ ನೀ ದೂರ ಹಾಡು ಹೇಳದಲೆ.

ಬುದ್ಧ ನಕ್ಕಿದ್ದು ನಾ ಕಾಣೆ ಗೆಳತಿ ನೀ ನಕ್ಕ ಹಾಲ್ಗೆಣ್ಣೆ
ಸೂರ್ಯ ನಗುವುದನ್ನು ನೋಡು ಪ್ರೇಮ ಗದ್ದುಗೆಯ ಮೇಲೆ .


‌‌‌‌‌‌‌‌‌ // ಮೃದಂಗಜ//

‌ ಸುರೇಶ ಜಕಾತಿ. ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

21 Jan 2020, 03:34 pm
Download App from Playstore: