ಕನ್ನಡದ ಹೈಕುಗಳು
ಕನ್ನಡದ ಹೈಕುಗಳು
--------------------------------
೨೩೧.
ಸುಳ್ಳು ಸಾಕ್ಷಿ ಹೇಳುವುದೆಂದರೆ
ಮಹಾ ಅಪರಾದ ಮಾಡಿದಷ್ಟು ಹೆದರಿಕೆ
ಏಕೆಂದರೆ ಅದು ಆತ್ಮ ಸಾಕ್ಷಿಯ ವಿರುದ್ಧ.
೨೩೨.
ಸಾವಿನ ಜೊತೆ ಹೊರಾಡುವವರೆಲ್ಲರೂ
ಯಮಧರ್ಮನ ಸಂಬಂಧಿಕರು
ಏಕೆಂದರೆ ಚಿತ್ರಗುಪ್ತನ ಲೆಕ್ಕದಲ್ಲಿ
ಇದೂ ಕೂಡ ಒಂದು ಹಣೆಯ ಬರಹ.
೨೩೩.
ಬ್ರಹ್ಮ ಸತ್ಯಗಳಲ್ಲಿ ಈಶ್ವರೀಯ ಗುಣ
ಎದ್ದು ಕಾಣುವುದು.ಏಕೆಂದರೆ
ಅದು ಪಂಚ ಮಹಾಭೂತಗಳಿಗಿಂತಲೂ
ಅತೀತ ಮತ್ತು ಮಿಗಿಲಾದದ್ದು.
೨೩೪.
ಸ್ವಾರಸ್ಯಕರ ಸಂಗತಿ ಎಂದರೆ
ಸೇವಾ ಮನೋಭಾವವೂ ಇಂದು
ವ್ಯಾಪಾರೀಕರಣದ ಹಂತ ತಲುಪಿದೆ.
೨೩೫.
ಸಂದರ್ಭ ಹಾಗೂ ಸನ್ನಿವೇಶಗಳಲ್ಲಿ
ಮನುಷ್ಯನ ವರ್ತನೆ ಕಾಗೆ,ಗೂಬೆ
ಗಳಿಗಿಂತಲೂ ಘೋರವಾಗಿರುವುದು
ಏಕೆಂದರೆ ವಯಸ್ಸಾದ ಮೇಲೆ
ಇದೆಲ್ಲವೂ ಸಹಜ.
೨೩೬.
ಪರಂಪರೆಗಳನ್ನು ಬೆನ್ನು
ಹತ್ತಿದಾಗಲೆಲ್ಲ.ಪುಕ್ಕಟೆಯಾದ
ವಿಚಾರಗಳು ತಿಳಿದು ಬರುವವು
ಅವೇ ನಮ್ಮ ವೇದೋಪನಿಷತ್ತುಗಳು.
೨೩೭.
ಸಂಬ್ರಮದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ
ದೇಶ ವಿದೇಶಗಳಲ್ಲೆಲ್ಲಾ ಹೆಸರು ಮಾಡಿತ್ತು
ಆದರೆ ಬಡವರ ಮನೆಯ ಜ್ಯೋತಿಯು
ಎಣ್ಣೆ ಬತ್ತಿ ಇಲ್ಲದೆ ನರಳುತ್ತಿತ್ತು.
೨೩೮.
ಸುಂದರವಾದ ಶರೀರ,ರೂಪ,ಲಾವಣ್ಯಗಳು
ಶಿವನಿಗಿಂತಲೂ ಪ್ರಖರವಾದವು.
ಇದೇ ವಿಚಾರವಾಗಿ ಬೆನ್ನು ಹತ್ತಿದ
ವಿಶ್ವಾಮಿತ್ರನ ಧರ್ಮ ಲಾಂಚನ
ಗಿಡಗಂಟೆಗಳಲ್ಲಿ ನೇತಾಡುತ್ತಲಿತ್ತು.
೨೩೯.
ಮುಂಬರುವ ಜಗತ್ತು ಧರೆಯ ಮೇಲಿನ
ಸ್ವರ್ಗವೆಂಬುದೊಂದು ಹಿತೋಕ್ತಿ.
ಆದರೆ ಅದರ ವಿರುದ್ಧ ವಾದುದೆಲ್ಲವೂ
ಇಂದು ತಾನೆ ರಾಜನೆಂಬಂತೆ ಮೇರೆಯುತ್ತಲಿದೆ.
೨೪೦.
ನಮ್ಮ ಸಮಾಜದ ಬಹು ಮುಖ್ಯ ವಿಚಾರ
ನೀತಿಬೋಧನೆ .ಏಕೆಂದರೆ ಬೋಧಕರೆಲ್ಲರೂ
ತರಬೇತಿಯನ್ನು ಪಡೆಯುತ್ತಲಿರುವ
ಜ್ನಾನ ಪಿಪಾಸುಗಳು.
೨೪೧.
ಸಮಬಲದಿಂದ ಗೆದ್ದುದೆಲ್ಲವೂ
ಕ್ರಾಂತಿ ಎಂದರೆ ಹೇಗೆ ?
ಎಲ್ಲರೂ ಬಿದ್ದಾಗ ತಾನೆ
ಎದ್ದೇಳಬೇಕು.!!
೨೪೨.
ನಿದ್ದೆಯಿಂದವತರಿಸಿದ ಕನಸು
ಇಂದು ನಿನ್ನೆಗಳ ಮರೆತು
ನಾಳೆಗಳನ್ನಷ್ಟೇ ಮೆಲುಕು
ಹಾಕುತ್ತಿದೆ.
೨೪೩.
ಜಗತ್ತಿನ ಜನರೆಲ್ಲರೂ ಬದಲಾಗುತ್ತಿದ್ದಾರೆ
ಎಂದರೆ ಸ್ವಾನುಭವ ಮತ್ತು ಸ್ವಾಧ್ಯಾಯ
ಎರಡೂ ಎಲ್ಲರಲ್ಲೂ ಹೆಚ್ಚಾಗಿರುವುದು.
೨೪೪.
ಅವಕಾಶಗಳು ಇಂದು ನಮ್ಮನ್ನೇ
ಹಿಂದೆ ಹಾಕಿ ಮುನ್ನುಗ್ಗುತ್ತಲಿವೆ
ಎಂದರೆ ಬೇರೆಯವರು ಅವುಗಳ
ಪ್ರಯೋಜನ ಪಡೆಯುತ್ತಲಿದ್ದಾರೆ.
೨೪೫.
ಗುರುಪರಂರೆಯನ್ನು ಮರೆಯುವುದೆಂದರೆ
ನಮ್ಮ ಅಜ್ಞಾನ ನಾವು ಒಪ್ಪಿಕೊಂಡಂತೆ.
೨೪೬.
ಸುಲಲಿತವಾದ ಸಾಹಿತ್ಯ ರಚನೆಗೆ
ವೇದೋಕ್ತಿಗಳೇ ಬೇಕಾಗಿಲ್ಲ
ಸೃಜನಶೀಲತೆ ಇದ್ದರೆ ಸಾಕು.
೨೪೭.
ಅರಿವು ಮತ್ತು ಆಚಾರ ನಮ್ಮ
ನಾಲಿಗೆಯ ಮೇಲೆ ನಡೆದಾಡಬೇಕಾದ
ಎರಡು ಅಂತಿಮ ಸತ್ಯಗಳು.
೨೪೮.
ಅರಿವಿನ ಮನೆ ಈ ಶರೀರ.
೨೪೯.
ಅವಸಾನದ ಅಂಚಿನಲ್ಲಿದ್ದ
ಆತ್ಮನಿಗೆ ಬ್ರಹ್ಮನು ತನ್ನ ಪದವಿ ಕೊಟ್ಟಂತೆ
ಮಾಯಾ ಬಜಾರು ಈ ಶರೀರ.
೨೫೦.
ಸುಂದರವಾದದ್ದೆಲ್ಲವೂ
ಅನುಭವಿಸಲು ಇರುವುದಲ್ಲ,
ಆರಾಧಿಸಲು.ಅದಕ್ಕೆಂದೆ ಹೇಳುವರು
ಸತ್ಯಂ,ಶಿವಂ,ಸುಂದರಂ.
// ಮೃದಂಗಜ//
ಸುರೇಶ ಜಕಾತಿ. ಜಮಖಂಡಿ
8746086658
- ಸುರೇಶ ಜಕಾತಿ.ಜಮಖಂಡಿ
23 Jan 2020, 07:53 pm
Download App from Playstore: