ಪ್ರಾಮಾಣಿಕತೆ

ಪ್ರಾಮಾಣಿಕತೆಯ ಬೆಳಕ
ಜಗಕೆ ಪಸರಿಸಲು ಹೊರಟೆ
ಅಂಧಕಾರದ ಅಮಲು
ಪ್ರಾಮಾಣಿಕತೆನ್ನೇ ಕೂಡಿ ಹಾಕಿತಲ್ಲ..!

ಬುದ್ದನೊಳಗಿನ ಶುಭ್ರ ಮನದ
ಪ್ರಾಮಾಣಿಕತೆಯ ಪರಿ ಆತನ
ಹಿಂಬಾಲಕರಿಗೂ ಮತ್ತೊಬ್ಬ
ಬುದ್ದನಾಗಲು ಸಾಧ್ಯವಾಗಲಿಲ್ಲವಲ್ಲ..!

ನಗು ಮುಖದೊಳಗಿಹ ನೈಜ
ಸೌಂದರ್ಯದ ಪ್ರಾಮಾಣಿಕತೆ
ಅದೆಷ್ಟು ಬಣ್ಣ ಬಳಿದರೂ
ಅವಳೊಳಗೆ ಬರಲೇ ಇಲ್ಲವಲ್ಲ..!

ಪ್ರಾಮಾಣಿಕತೆಯ ತೂಕ ಹೆಚ್ಚಿದಷ್ಟು
ಮನದ ನೆಮ್ಮದಿ ಹೆಚ್ಚಾಯಿತು ನೋಡು..!
ಪ್ರಾಮಾಣಿಕತೆ ತೂಕ ಕುಗ್ಗಿದಷ್ಟು
ಮನದ ನೆಮ್ಮದಿ ಕಡಿಮೆಯಾಯಿತಲ್ಲ..!

- ಅಕ್ಷತ

24 Jan 2020, 10:37 pm
Download App from Playstore: