ನನ್ನ ಬಾಳ ಭಾಗ್ಯದೇವಿ

ನಗುವ ಒಲವ ಮೀಟಿ
ಹೃದಯ ಬಡಿತ ದಾಟಿ
ನೀ ಬಂದೆ ನನ್ನ ಬಾಳಲಿ
ಮಮತೆ ನೀ ತಂದೆ ತೋಳಲಿ...!!ಪ!!

ನೋವಿನ ಕಡಲು ದಾಟುತ
ಮೀನಿನ ಹೆಜ್ಜೆ ಹಾಕುತ
ಕಂಡೆ ಬಾಳಲ್ಲಿ ಬೆಳಕನ್ನು
ನಿನ್ನ ಜೊತೆಗೂಡಿ ನಾ ಸಾಗಲು

ಉಸಿರು ಬಿಸಿಯಾಗಿ ನಿನ್ನದೆ ನೆನಪಾಗಿ
ಸಾಗಿತು ಈ ಬದುಕಿನ ದೋಣಿಯು
ಸಾರಥಿಯು ನೀ ನನ್ನ ಜೊತೆಗೂಡಲು
ಬಯಲಾಯಿತು ಭಯವೆಂಬ ಈ ಕತ್ತಲೆಯು

ನೂರು ಜನ್ಮ ಕಳೆದರು
ಬೇಡುವೆ ನಿನ್ನ ವರವಾಗಿ
ಆ ದೇವ ನಮ್ಮ ನೋಡುತ
ಹರಸಲಿ ನಮ್ಮ ಬಾಳ್ವೆಗೆ
ಸುಖ ಶಾಂತಿ ನೆಮ್ಮದಿಯ ನೆಲೆ ನೀಡುತ....

- Irayya Mathad

23 May 2016, 05:22 am
Download App from Playstore: