ನಿನ್ನ ನೋಡಿದ ಕ್ಷಣವೂ ಕಾಡಿದೆ
ನಿನ್ನ ನೋಡಿದ ಕ್ಷಣವೂ ಕಾಡಿದೆ
ನನ್ನ ಹೃದಯವು ತನನ ಎಂದಿದೆ!!
ಕವನ ಬರೆಯುವ ಗೀಳು ಹತ್ತಿದೆ
ಮನದ ಪುಸ್ತಕ ತುಂಬಿ ಹೋಗಿದೆ!!
ಈ ಏಕಾಂಗಿಯ ಸಂಚಾರದಲಿ
ಜಾತ್ರೆಯ ಮೆರವಣಿಗೆ ದಿನ ಸಾಗಿದೆ!!
ಬಿಳಿ ಹಾಳೆಯ ಕಲ್ಪನೆಯಲಿ
ಬಣ್ಣದ ಚಿತ್ತಾರ ತಾ ಮೂಡಿದೆ!!
ಆ ಚಂದ್ರಮನ ಮರೆಮಾಡಲು
ಬಾನಿಗೆ ಚಪ್ಪರವ ಹಾಕಬೇಕಿದೆ!!
ಚುಕ್ಕಿ ತಾರೆಗೆ ಕೂಡಿ ಕಳೆಯುವ
ಲೆಕ್ಕಾಚಾರವ ಹೇಳಿ ಕೊಡಬೇಕಿದೆ!!
ನಾ ಸಾಗಲು ಹೆಜ್ಜೆ ಗುರುತದು
ಹಿಂದೆ ಬರುತ ಈಗೀಗ ಕೆಣಕುತ್ತಿದೆ!!
ಕಂಡು ಕಾಣದ ಹೊಸ ಲೋಕವು
ಕೈ ಬೀಸಿ ನನ್ನನ್ನು ಕರೆದಂತಿದೆ!!
- ಪಿ.ಜಿ.ಜ್ಯೋತಿ
29 Jan 2020, 10:48 am
Download App from Playstore: