ಬಾಯಿ ಎಂಬುದೊಂದು ಗಡಗಿ

ಭಗವಂತನಿಗೆ ಈಗಿಗ ಹೋಮ್ ಗಾರ್ಡ ಕೆಲಸ ಜೋರ.
ಡ್ರೆಸ್ ಇಲ್ಲ, ಪಗಾರ ಇಲ್ಲ, ರೆಸ್ಟ್ ಅಂತೂ ಬೇಕಾಗೇ ಇಲ್ಲ.
ಮನೆ ಕಂಪೌಡ ಗೋಡೆಗೆ ಆನಿಸಿ ಕೂಡಿಸಿದರೆ ಸಾಕ.
ಬಾಯ ಗಡಗಿ ಕಿಡ್ನಿ ಗಡಗಿ ತುಂಬಕೊಂಡ ಸನಿಹ ಬಂದವರಿಗೆ ಹಲ್ಲ ಕಿರಿದು ಕೈ ಮುಗಿದ ಮುಂದಕೆ ಕಳಸ್ತಾನೆ.
ಭಗವಂತನಿಗೆ ಈಗಿಗ ರಸ್ತೆಗೆ ಜಾಗ ಹೋಗದಂತೆ ಕಾಯೋ ಕೆಲಸ ಜೋರು.
ಆ ಜಾಗದಲ್ಲಿ ಸಣ್ಣದೊಂದು ಗುಡಿ ಕಟ್ಟಿ
ಹಣೆಗೆ ಒ‌ಂದಿಷ್ಟು ಕೂಕಮಾ ಇಬತ್ತಿ ಬಳಿದು ಊದಕಡ್ಡಿ ಬೇಳಗಿಸಿ ಇಟ್ರ ಸಾಕ.
ಯಾವ ಕೋರ್ಟ ಕಛೇರಿಯಂದ ಆರ್ಡರ ತಂದ್ರು ಅಳಗಾಡಂಗಿಲ್ಲ ಒಂದೈವತ್ತವರ್ಷ.

- Siddugouda

31 Jan 2020, 02:55 pm
Download App from Playstore: