ಬಾಳ ಬೆಟ್ಟವ ಹತ್ತೋಣ

ಬಾ ಗೆಳತಿ ಕೈ ಕೈ ಹಿಡಿದು ಬಾಳ ಬೆಟ್ಟವ ಹತ್ತೋಣ
ಕಲ್ಲು ಮುಳ್ಳಗಳ ಮೆಟ್ಟಿ ನಿಲ್ಲೋಣ
ಬಾಳ ಹಾದಿಯಲಿ ಮುಳ್ಳು ಇಟ್ಟವರಿಗೆ ಹುಡುಕಿ ಗುಲಾಬಿ ಹೂ ಕೊಡೋಣ.
ವಿಷದ ಬಟ್ಟಲು ತಂದವರಿಗೆ ಅಮೃತದ ಪಾಯಸವ ಕುಡಿಸೋಣ.
ಹರಿದ ಪಟದ ಸೂತ್ರವ ಎಳದು ತಂದು ಕಟ್ಟಿ ಮತ್ತೆ ಬಾನಿಗೆ ಪಟವ ಹಾರಿಸೋಣ.
ನಂಜೇರಿದ ಅಚ್ಚಿನಲಿ ಬೆಲ್ಲದ ಪಾಕವ ಸುರಿಯೋಣ
ನೆಲಕೆ ಕಿತ್ತಿ ಬಿದ್ದ ರೆಕ್ಕೆ ಪುಕ್ಕಗಳನು ಹೆಕ್ಕಿ ತಂದು ಅಂಟಿಸಿ ಮತ್ತೆ ರೆಕ್ಕೆ ಬಡೆಯುವಂತೆ ಮಾಡೋಣ.
ಕಣ್ಣಲ್ಲಿ ಕರಗಿದ ಕಣಸುಗಳ ಜಾಗದಲಿ ಹೊಸ ಕನಸುಗಳ ಹೆಣೆಯೋಣ
ನಾವು ನಡೆವ ಹಾದಿಯಲ್ಲಿ ಮುಳ್ಳು ಇಟ್ಟವರನ ತಬ್ಬಿ ಮುಂದೆ ನಡೆಯೋಣ
ಹೃದಯಕೆ ಆದ ಗಾಯಗಳಿಗೆ ಪ್ರೀತಿಯ ಮುಲಾಮ ಹಚ್ಚೋಣ
ಒಣಗಿದ ರೆಂಬೆ ಕೊಂಬೆಗಳಲಿ ಚಿಗರು ಒಡಮೂಡಿ ಬರಲು ಸ್ನೇಹ-ಪ್ರೀತಿಗಳೆಂಬ ನೀರು ಹಾಕೋಣ.
ಅಂದಕಾರ ಕವಿದ ಮನಗಳ ಹೃದಯ ಬಾಗಿಲಲಿ ಸಾಲು ದೀಪಗಳ ಬೆಳಗಿಸೋಣ.
ನಮಗೆರಡು ಬಗೆದವರು ಎಂದೆಂದು ಒಂದಾಗಿ ಬಾಳಲೆಂದು ಹಾರೈಸೋಣ
ಸುಟ್ಟ ಕನಸುಗಳ ಜಾಗದಲಿ ಬರವಸೆಯ ಸಸಿಯ ನೆಡೋಣ‌
ಬಾ ಗೆಳತಿ ಕೈ ಕೈ ಹಿಡಿದು ಬಾಳ ಬೆಟ್ಟವ ಹತ್ತೋಣ
ಮುಲ್ಲು ಕಳ್ಳುಗಳ ನು ಮೆಟ್ಟಿ ನಿಲ್ಲೋಣ.

- Siddugouda

31 Jan 2020, 04:29 pm
Download App from Playstore: