ಹೊಸ ಜೀವನ ಸಾಗಿದೆ
ಈ ಸುಂದರ ಬೆಳದಿಂಗಳು
ಬಾನಿಂದ ಭುವಿಗೆ ಜಾರಿದೆ!!
ನನ್ನಾಸೆಯ ಮೊಗ್ಗೆಲ್ಲವೂ
ಹೂವಾಗಿ ಅರಳಿ ನಿಂತಿದೆ!!
ಋತುಮಾನ ಉರುಳಿ
ಶತಮಾನವು ಮರಳಿದೆ!!
ನಿಂತಿರುವ ಶಿಲೆಯೊಂದು
ಹೆಣ್ಣಾಗಿದೆ ನನ್ನ ಕಣ್ಣಾಗಿದೆ!!
ಅಂಗೈಯ ಬೊಗಸೆಯಲಿ
ನವ ಭಾವನೆಗಳು ತುಂಬಿದೆ!!
ತಂಗಾಳಿಯ ತಂಪಿನಲಿ
ಹೂ ಗಂಧವು ಬೆರೆತಿದೆ!!
ಸೊಗಸಾದ ಬಾನಂಗಳವು
ಹಕ್ಕಿಗಳನು ಕರೆದಿದೆ!!
ಚುಕ್ಕಿಗಳ ಊರಿನಲಿ
ಹೊಸ ಜೀವನ ಸಾಗಿದೆ!!
- ಪಿ.ಜಿ.ಜ್ಯೋತಿ
31 Jan 2020, 04:47 pm
Download App from Playstore: