ನಿನ್ನ ನೆನಪು.
ಮೋಹಕ ಅಲೆಗಳು
ಮುತ್ತಿಟ್ಟು ಹೋದ
ಮರಳು ರಾಶಿಯ
ಎದೆಯ ಮೇಲೆ
ಬಿದ್ದ ಹಸಿರಾದ
ಹಸಿ ಎಲೆಯಂತೆ
ನಿನ್ನ ನೆನಪು,
ಹಾಲ್ನೊರೆತದ ಧಾಳಿಗೆ
ಸಿಲುಕಿ ಇನ್ನೇನು
ನೀರ ಪಾಲಾಗುತ್ತಿದ್ದಂತೆ
ಅಲೆಗಳ ಅಬ್ಬರಕ್ಕೆ
ಸೋತು ಬಿಟ್ಟು
ಮತ್ತೆ ಪುನಃ
ದಡ ಸೇರುತ್ತಿದೆ.!
- ಅಕ್ಷತ
05 Feb 2020, 03:52 pm
Download App from Playstore: