ಹೇಗೆ ತಿಳಿಸಲಿ ಗೆಳೆಯ..?

ಹೇಗೆ ತಿಳಿಸಲಿ ಗೆಳೆಯ..?
ನನ್ನೊಳಗೆ ಅಡಗಿರುವ ಭಾವನೆಯ
ಎದುರು ಬಂದಾಗೆಲ್ಲ ತಿಳಿಸುವ ಹಂಬಲ
ಆದರೂ ಸಾಲುತ್ತಿಲ್ಲ ಧೈರ್ಯ.

ನಿನ್ನ ಒಂದು ಮಾತು ಸಾಕೆನಗೆ
ದಿನವೆಲ್ಲ ಕಳೆಯಲು ಹಗಲು ಕನಸಿಗೆ,
ರಾತ್ರಿಯೂ ಅದೇ ಕಥೆಯಾಗಿದೆ
ಯಾರಿಗೆ ಹೇಳಲಿ ನನ್ನೀ ವ್ಯಥೆ.

ಆಗಾಗ ಜಾರುವ ಕಣ್ಣೀರಿಗೆ ಕಾರಣ ನೀ
ಮನದೊಳಗೆ ಮನೆ ಮಾಡಿ ಹೋದೆ,
ಬರಬಾರದೆ ಆಗಾಗ ಬಾಗಿಲ ತಟ್ಟಿ
ಕಾಯುತಿರುವೆ ನಿನಗೆಂದು ಕನಸುಗಳ ಕಟ್ಟಿ

ಎಂದು ಬರುವೆ ಹೇಳು ಗೆಳೆಯ..?
ನಿನ್ನ ಬಿಟ್ಟು ಬದುಕು ಕಷ್ಟವಾಗಿದೆ,
ಮನಸ್ಸಿನೊಳಗಿರುವ ಗುಟ್ಟು ರಟ್ಟು ಮಾಡಲು
ಕಾಯುತ್ತಿರುವೆನು ತುದಿಗಾಲಿನಲ್ಲಿ..

- ಅಕ್ಷತ

07 Feb 2020, 06:12 pm
Download App from Playstore: