ಯವ್ವಾ.. ನಿನ್ನ ಮರೆಯಲಿ ಹ್ಯಾಂಗ

ಯವ್ವಾ..
ನಾ ನಿನ್ನ ಮರೆಯಲಿ ಹ್ಯಾಂಗ
ನೀನಿಲ್ಲದ ಬಾಳು ಬಾಳಲಿ ಹ್ಯಾಂಗ

ನವಮಾಸ ಹೊತ್ತಿದ್ದಿ
ತಾಯ್ತನವ ಪಡೆದಿದ್ದಿ
ನಿನ್ನ ಒಡಲಿಂದ ನನಗ
ಕರುಳ ಕತ್ತರಿಸಿ ನೀಡೀದಿ
ಯವ್ವ ನಿನ್ನ ಮರೆಯಲಿ ಹ್ಯಾಂಗ
ಮರೆತು ಬಾಳಲಿ ಹ್ಯಾಂಗ..!

ನಿನ್ನೆಯವರೆಗೂ ನೀ
ನನಗ ಲಾಲಿ ಹಾಡಿದಿ
ಚಿಕ್ಕವನಿದ್ದಾಗ
ಎದೆಹಾಲ ಕುಡಿಸೀದಿ
ಮಡಿಲಲ್ಲಿ ಮಲಗಿ ಎದೆಗೆ ಒದ್ದಾಗ
ಕುಪ್ಪಳಿಸಿ ಕುಣಿದಂತೆ ಭಾಸವಾಗೀದಿ
ಯವ್ವಾ ನಿನ್ನ ಮರೆಯಲಿ ಹ್ಯಾಂಗ
ಮರೆತು ಬಾಳಲಿ ಹ್ಯಾಂಗ..!

ನಾ ಸ್ನಾನ ಮಾಡುವಾಗ
ನೀ ತಲೆಯ ಒರೆಸಿದಿ
ನಾ ಚಂದ ಕಾಣಲೆಂದು
ಬಣ್ಣ ಬಣ್ಣದ ಅಂಗಿ ತೋಡಿಸಿದಿ
ನನ್ನಯ ಬೆಳೆವಣಿಗೆಯಲಿ
ನೀ ಖುಷಿಯ ಕಾಣುತ
ಹಳೆಯ ಉಡುಗಿ ಉಡುತ ನೀ ಬದುಕೀದಿ
ಯವ್ವಾ ನಿನ್ನ ಮರೆಯಲಿ ಹ್ಯಾಂಗ
ಮರೆತು ಬಾಳಲಿ ಹ್ಯಾಂಗ..!

ನಿನ್ ಕಂಕಳಾಗ್ ನನ್ ಎತ್ಕೊಂಡು
ಕಾಲಾಗ್ ಚಪ್ಲಿ ಇಲ್ದ
ಮುಳ್ ಚುಚ್ಚಿದ್ರು
ಬರಿಗಾಲಾಗ ಹೋಲದ ಮ್ಯಾರಿಮ್ಯಾಲ
ನೀ ನಡಿದೀದಿ..
ಮೈ ಮುರಿದು ದುಡುದೀದಿ
ಬಿಸಿ ಅನ್ನ, ಜೋಳದ ರೊಟ್ಟಿ
ಹಾಲು ಮೊಸರು ತುಪ್ಪ ನೀಡೀದಿ
ಕೂಸು ಬೆಳಿಲೆಂದು
ಸಿಹಿ ತಿನಿಸು ತಿನಿಸೀದಿ..
ನೀನು ಉಣಲಾರ್ದ
ಹಸಗೊಂಡು ನೀರ್ ಕುಡಿದು
ಹಂಗಾ ಮಲಗೀದಿ..
ನಿನ್ನ ಮರೆಯಲಿ ಹ್ಯಾಂಗ
ಋಣವ ತೀರಿಸಲಿ ಹ್ಯಾಂಗ..!

ಮಗ ಶ್ಯಾಣ್ಯಾ ಆಗಲೆಂತ
ಸಾಲೀಗಿ ಸೇರಿಸೀದಿ
ರೊಕ್ಕ ಕೊಟ್ಟು ಪಟ್ಟಣಕ
ಓದಾಕ ಕಳಿಸೀದಿ
ಬಂಗಾರ ಬೇಡ್ಲಿಲ್ಲ
ತೊಳಬಂಧಿ ಬಿಗಿಲಿಲ್ಲ
ನಾನಾ ಬಂಗಾರ ಅಂದೀದಿ..
ಮಗ ಅಂದ್ರ ಸಾಕು ಸಾಗರ ಬಿಳ್ತೀದಿ..
ಯವ್ವಾ ನಿನ್ನ ಮರೆಯಲಿ ಹ್ಯಾಂಗ
ನಿನ್ನ ಋಣವ ತೀರಿಸಲಿ ಹ್ಯಾಂಗ..!

ನಿನಗಾಗಿ ಬದುಕೀನಿ
ನಿನ್ನ ಪ್ರತಿಕ್ಷಣವೂ ನೆನಿತೀನಿ
ನೀನಿತ್ತ ಜನುಮಕ
ನೂರ್ನಮನ ಸಲ್ಲಿಸುತ..
ಮರು ಜನುವಿದ್ದರೆ ನಿನ್ನ ಮಗನಾಗೇ
ನಿನ್ನ ಮಡಿಲಲ್ಲೇ ಹುಟ್ತೀನಿ..
ಯವ್ವಾ..
ನಿನ್ನ ಋಣವ ತೀರಿಸಲಿ ಹ್ಯಾಂಗ
ನಿನ್ನ ಕೂಸಾಗಿ ಬದುಕುವೆನು ಹೀಂಗ..!

~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

08 Feb 2020, 11:18 pm
Download App from Playstore: