ಹೆಣ್ಣೆಂದರೆ...

ಜರಿಯಬೇಡಿರಿ ನನ್ನ ಹೆಣ್ಣೆಂದು,
ಸಮಾಜದಿ ನಾನು ಹುಣ್ಣೆಂದು..!

ನಿನ್ನ ಹೆತ್ತವಳು ಹೆಣ್ಣು
ಹೊತ್ತವಳೂ ಹೆಣ್ಣು
ಅಷ್ಟೇ ಏಕೆ...
ಹುತ್ತು ಬಿತ್ತು ಬದುಕಲು
ತಿನ್ನುವ ಅನ್ನ ಅದೂ ಹೆಣ್ಣು..!

ಜರಿಬೇಡಿರಿ ನನ್ನ ಹೆಣ್ಣೆಂದು
ಸಮಾಜದಿ ನಾನು ಹುಣ್ಣೆಂದು..!

ನಿಮ್ಮ ಬೆನ್ನಿಗೆ ಹುಟ್ಟಿದ
ಸಹೋದರಿಯು ಹೆಣ್ಣು,
ನಿಮ್ಮ ಬೆನ್ನ ತಟ್ಟುವ
ಅರ್ಧಾಂಗಿಯು ಹೆಣ್ಣು,
ನಿನ್ನ ರಕುತವನೇ
ಹಂಚಿಕೊಂಡ ಮಗಳೂ ಹೆಣ್ಣು...!

ಜರಿಬೇಡಿರಿ ನನ್ನ ಹೆಣ್ಣೆಂದು
ಸಮಾಜದಿ ನಾನು ಹುಣ್ಣೆಂದು..!

ಸೌಂದರ್ಯವತಿ ಪಕೃತಿಯನೇ
ಹೋಲಿಸಿರುವಿರಿ ಹೆಣ್ಣಿಗೆ,
ಲಕ್ಮೀ-ಸರಸ್ವತಿಯರೆಂಬ ಹೆಣ್ಣೆ
ಒಡತಿಯರೆಂದು ಬಣ್ಣಿಸಿರುವಿರಿ
ಧನ-ಕನಕ-ವಿದ್ಯೆಗೆ,
ಅಷ್ಟೇ ಏಕೆ..
ಭರತಖಂಡದ ಮೂಲಪುರುಷ
ಭರತ ಮಹಾರಾಜನು
ಆದರೂ ಪೂಜಿಪಿರಿ ಹೆಣ್ಣಾದ
ಭರತಮಾತೆಯೆಂಬ ಹೆಸರಿಗೆ..!

ಜರಿಬೇಡಿರಿ ನನ್ನ ಹೆಣ್ಣೆಂದು
ಸಮಾಜದಿ ನಾನು ಹುಣ್ಣೆಂದು..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

12 Feb 2020, 08:35 pm
Download App from Playstore: