ಅಗ್ನಿಯೆಂಬ ಸಿಂಹಾಸನ
ಎನ್ನ, ಕರ್ಪೂರದ ರಾಜನ ಗೊಂಬೆಯ ಮಾಡಿ
ಅಗ್ನಿಯೆಂಬ ಸಿಂಹಾಸನದ ಮೇಲೆ ಕುಳ್ಳಿರಿಸಿದರಯ್ಯ
ಅಗ್ನಿಸ್ಪರ್ಶದಿಂದ ಶೂನ್ಯದಲ್ಲಿ ಲೀನವಾಗಿ ಅಡಗಿದೆನಯ್ಯ
ಎನ್ನ, ಮಂಜುಗಡ್ಡೆಯ ಗೊಂಬೆ ಮಾಡಿ
ಮಂಜುಗಡ್ಡೆಯ ಹರಗೋಲಲಿ ಕುಳ್ಳಿರಿಸಿ ತಳ್ಳಿದರಯ್ಯ
ಸಮುದ್ರದ ನೀರನ ಸ್ಪರ್ಶದಿಂದ ಶೂನ್ಯದಲ್ಲಿ ಲೀನವಾಗಿ ಅಡಗಿದೆನೆಯ್ಯ
ಎನ್ನ, ಗಾಳಿ ಗೋಪುರವ ಮಾಡಿ
ಗಾಳಿಯ ಸುಳಿಯೊಳಗೆ ತೂರಿ ಬಿಟ್ಟರಯ್ಯ
ಗಾಳಿಯ ಸ್ಪರ್ಶದಿಂದ ಶೂನ್ಯದಲ್ಲಿ ಲೀನವಾಗಿ ಅಡಗಿದೆನಯ್ಯ
ಶೂನ್ಯದ ಶೂನ್ಯ ಪೀಠದ ಅಧಿಪತಿ ಗುರು ಬಸವ ಪ್ರಿಯ ರೇವಣದಿದ್ದೇಶ್ವರ ನೀವಿರುವಾಗ ನಾ ನಿಶ್ಚಿಂತಿಗೊಂಡೆನಯ್ಯ.
ಕೃಪೆ: ಎಲ್ಲ ಶರಣರು.
- Siddugouda
13 Feb 2020, 02:18 pm
Download App from Playstore: