ಗೆಳೆಯನೆಂಬ ಏಕಾಂತ !
ಕಾದು ಕಳೆದಿಹೇ ವರುಷಗಳ
ಒಂದು ಒಳ್ಳೆ ಗೆಳೆಯನ ಹುಡುಕಿ,
ಭಾಗ್ಯಾ ವಂಚಿತನಾದೆ ಸ್ನೇಹಿತರ ಸಂಗತಿಯಲ್ಲಿ,
ಸಿಕ್ಕರು ಸಿಹಿಯಾದ ಸ್ನೇಹಿತರು ದೂರವಾಗಿ ಹೋದರು ನನ್ನಿಂದ.
ಏನು ಹೇಳಲಿ ನಾ ವಿಧಿಯ ವಿರಹ ಒಂದು ವಿಷವಾಗಿ ವದಿಸಿ ಕಾಣದಂತೆ ಹುದುಗಿ ಹೋಹಿತು ಕಾಲವೆಂಬ ಗೋರಿಯಲ್ಲಿ ನನ್ನ ಗೆಳೆತನ.
ಕಾದು ಕಾಲಗಳು ಉರುಳಿದವು,
ಮರೆಯಗುತ್ತಿದೆ ನನ್ನ ಯವನವು,
ಮಾಯವಾದವು ನಗುವಿನ ಹೆಜ್ಜೆ ಗುರುತುಗಳು ಅನರ್ಥವಾಯಿತು ನನ್ನ ಮನದ ಭಾವಗಳು
ಬೇಡವಾಗಿ ಹೋಗಿದೆ ಈ ಬಾಳು
ಹರುಷ ತರುವ ಒಬ್ಬ ಗೆಳೆಯನಿಲ್ಲದೆ.
ನೀರಮೇಲಿನ ಬರಹದಂತಾಗಿದೇ ನನ್ನ ನಂಬಿಕೆಗಳು ಸೊರಗಿ ಸೋತು ಹೋಗಿವೇ ನನ್ನ ಬಣದ ಕನಸುಗಳು ಇಲ್ಲವಾಯಿತೊಂದು ಅವಕಾಶ ಪಶ್ಚತ್ತಾಪ ಪಡಲು ಮಾಡದ ಪಾಪಗಳಿಗೆ.
ಮೌನಗಳು ಹಿತವಾಗಿ ವೇದನೆಗಳು ವಿಷವಾಗಿ ಹೋದವು ನೋವುಗಳೆ ನೆನಪಾಗಿ ಉಳಿದವು
ನನ್ನ ಎದೆಯಲ್ಲಿ ಏಕಾಂತದ ಗುರುತುಗಳೇ
ನನ್ನ ದಾರಿಯಲ್ಲಿ.
ವಿರಸಗಳೇ ಮೋಡವಾಗಿ ವೇದನೆಗಳ ಮಳೆಯೊಂದು ಸುರಿದಿದೇ ನನ್ನ ಬದುಕಿನ ಭೂಮಿಯಲ್ಲಿ.
- Kris
13 Feb 2020, 07:44 pm
Download App from Playstore: