ಮನದ ಮಾತು

ಕರೆಯದೆ ಬಂದೆ ನೀನು
ತಿಳಿಸದೆ ಹೋದೆ ಇಂದು
ನಾನು ನಿನ್ನ ಮರೆತಿಲ್ಲ
ಅದು ಸಾಧ್ಯನೂ ಇಲ್ಲ

ಸಿಕ್ಕಿದ ಕ್ಷಣ ಸಂತಸ
ನಂತರದ ಸಮಯ ಕಳೆದ ಹಾಗೆ
ದುಃಖಗಳ ಸುರಿಮಳೆ
ನಿಲ್ಲುವುದು ತುಂಬಾ ಕಷ್ಟ.

ನೆನಪಿಸಲು ಇಷ್ಟ ಇಲ್ಲದಿದ್ದರೂ
ನಿನ್ನೊಂದಿಗೆ ಕಳೆದ ಸಮಯ
ನೆನಪಾಗುತ್ತಾ ಇವೆ ಎಂದೂ
ಅದಕ್ಕೆ ದಡವೇ ಇಲ್ಲದಾಗೆ.

ಗುರಿ ಮುಟ್ಟುವ ಛಲವನ್ನು
ತಡೆಯುವ ಒಂದು ಶಕ್ತಿ
ಮುಂದೆ ಹೋಗದೆ ನಡು
ರಸ್ತೆಯಲ್ಲಿ ನಿಂತ ವಾಹನದಾಗೆ.

ಬದುಕು ಎಂಬುಹುದು
ನೀರಲ್ಲಿ ಇದ್ದ ದೋಣಿಯ ಹಾಗೆ
ಯಾವಾಗ ನೀರಲ್ಲಿ ಮುಳುಗುತ್ತಾರೆ
ಅಂದೇ ಜೀವನದಲ್ಲಿ ಕೆಳಗೆ ಬಿದ್ದಾಗೆ.

- azna

23 Feb 2020, 11:09 pm
Download App from Playstore: