ಇಂದು ನಾಳೆ ಎಂಬ ಮಾತು

ಇಂದು ನಾಳೆ ಎಂಬ ಮಾತು
ದಿನವ ನೂಕಿತು!!
ಆ ದಿನಗಳೆಲ್ಲ ಮುಂದೆ ಸಾಗಿ
ಬದುಕ ನೂಕಿತು!!

ಇದ್ದು ಇರದ ದೇಹದಿಂದ
ಉಸಿರು ನಿಂತಿತು!!
ಆ ಉಸಿರು ನಿಂತ ಮೇಲೆ
ಹೆಸರು ಮರೆತುಹೋಯುತು!!

ಜೊತೆಗೆ ಬರುತಲಿದ್ದ ನೆರಳು
ಮರೆಗೆ ಸರಿಯಿತು!!
ಮರೆಗೆ ಸರಿದ ಮೇಲೆ
ನನ್ನ ಒಬ್ಬಂಟಿ ಮಾಡಿತು!!

ಬಣ್ಣ ಬಣ್ಣದ ಸುಂದರ
ಬದುಕು ಮಾಸಿದಂತಾಯಿತು!!
ಬದುಕು ಮಾಸಿದ ಮೇಲೆ
ಎಲ್ಲಾ ನಶ್ವರವೇ ಆಯಿತು!!

- ಪಿ.ಜಿ.ಜ್ಯೋತಿ

26 Feb 2020, 09:06 am
Download App from Playstore: