ಮನದ ಕನ್ನಡಿ

ಹಾಯಾದ ಸಂಜೆಯಲಿ
ಹಿಡಿದಿಹೆನು ಲೇಖನಿ,
ಬರೆಯಬೇಕೆಂದಿರುವೆ
ಸುಂದರ ಶಾಯರಿ.
ಅರಿಯದೆ ಗೀಚುತಿರುವೆ
ಸಾಲು ಸಾಲು ಸಾಲುಗಳನ್ನು,
ಮನದೊಳಗೆ ಹುದುಗಿರುವ
ನೋವು ನಲಿವುಗಳೆಲ್ಲ
ಬಿಳಿ ಹಾಳೆಯ ಮೇಲೆ
ಬಣ್ಣ ತಳೆದುಕೊಂಡಿಹುದು,
ನನ್ನೆದೆಯ ಕನ್ನಡಿಯ
ನಾನೆ ಕಂಡು ಅಚ್ಚರಿಗೊಂಡು
ನನ್ನ ಮೊಗದ ಮೇಲೆ
ನನಗೆ ಅರಿವಾಗದಂತೆ
ಮಾಸದ ನಗು ಮೂಡಿದೆ.!

- ಅಕ್ಷತ

27 Feb 2020, 07:40 pm
Download App from Playstore: