ಏಕಾಂಗಿ

ಏಕಾಂಗಿ ಚಂದ್ರನ ಅಳುವಿಗೆ
ತಂಗಾಳಿ ಜೊತೆಯಾಗಿ
ಕೊರಗುವ ಮನಸಿನ ಕುಲುಮೆಗೆ
ನೆನಪುಗಳೇ ಬೆಂಕಿಯಾಗಿದೆ,
ಕಾಲದ ಕೊಡುಗೆ ಕೈಗುಡದೆ,
ಕಾಮನಬಿಲ್ಲಿನ ಕಾಂತಿಯು ಮಾಸಿದೆ.

ಯಾರು ಇಲ್ಲದ ಒಂಟಿ ಹೃದಯ ಸ್ನೇಹಕಾಗಿ ಕಾದಿದೆ ಮನವ ತೆರೆದು ಹೇಳೋ ತವಕವಿದರು
ಪದಗಳು ಮೌನವ ಕಾರಿದೆ
ಮೌನದ ಸಮರವಿದರು ಮಾತು ಹೊರಗೆ ಜಾರಿದೆ
ಕಣ್ಣ ತುಸು ಬೆವರ ಹನಿಯು ರೇಪೆಯಿಂದ ಹಾರಿದೆ.

ನೆನ್ನೇಗಳು ಬರಿದಾಗಿ,
ನೆನಪುಗಳು ಮರೆಯಗಿ,
ನನ್ನಗೆ ನನ್ನೇಂಬ ಪ್ರೀತಿಯು ನನ್ನಲಿ ಮೂಡಿದೆ
ಇಂದು ಹೊಸ ಬಾಳ ಚೈತನ್ಯವು ತುಂಬಿದೆ.

- Kris

28 Feb 2020, 09:36 am
Download App from Playstore: