ಹೃದಯವೆಂಬ ಖಾಲಿ ಹಾಳೆಯಲ್ಲಿ

ಹೃದಯವೆಂಬ ಖಾಲಿ ಹಾಳೆಯಲ್ಲಿ
ನೀ ಬರೆದೆ ಒಲವಿನ ಸಾಲುಗಳ!!
ಮನವೆಂಬ ಬಂಜರು ಬಯಲಿನಲ್ಲಿ
ನೀ ಬಿತ್ತಿದೆ ಸುಂದರ ಕನಸುಗಳ!!

ನಿಶ್ಯಬ್ಧವಾದ ಅಂತರಾಳದಲ್ಲಿ
ನೀ ನುಡಿಸಿದೆ ಸುಂದರ ವಾಧ್ಯಗಳ!!
ತುಟಿಯಂಚಿನ ಕಿರುನಗೆಯಲ್ಲಿ
ನೀ ಮರೆಸಿದೆ ಎಲ್ಲಾ ನೋವುಗಳ!!

ಬರವಸೆ ಕಾಣದ ಬಂಡೆದೆಯಲ್ಲಿ
ನೀ ತುಂಬಿದೆ ಹೊಸ ಭಾವಗಳ!!
ಕಾರ್ಮೋಡ ಸರಿಸಿ ಈ ಬದುಕಿನಲ್ಲಿ
ನೀ ಬಂದು ಸುರಿದೆ ಬೆಳದಿಂಗಳ!!

- ಪಿ.ಜಿ.ಜ್ಯೋತಿ

28 Feb 2020, 03:32 pm
Download App from Playstore: