ನೀನೆ ನನ್ನ ಮನದ ಮಾಹಾರಾಜನು

ಅವನ ಹೃದಯದಲಿ ಹೇಗೆ ಕಟ್ಟಲಿ ಪ್ರೀತಿಯ ಗೂಡೊಂದನು
ಪ್ರತಿ ಕ್ಷಣಗಳು ಕಳೆಯುತಿವೆ ನಿನ್ನದೆ ನೆನಪಿನಂಗಳದಲಿ

ಹುಸಿಯಾಗದಿರಲಿ ನನ್ನ ಕನಸು ಆ ಕನಸೆ ಎಂಥ ಸೊಗಸು
ನಿನ್ನ ಹೆಜ್ಜೆಯಲಿ ಹೆಜ್ಜೆ ಹಾಕುವ ಬಯಕೆ ಮೂಡಿದೆ

ಶೃಂಗಾರದ ಹೊಸ ಕಾವ್ಯವು ನಿನ್ನ ಕಂಡಲೆ ಎದೆಯ ತುಂಬಿದೆ
ತಿರುಗಿ ತಿರುಗಿ ನಿನ್ನ ನೋಡುವಾಸೆ ನೋಡಿ ನಿನ್ನ ಮುದ್ದಾಡುವಾಸೆ

ಇಲ್ಲಿವರೆಗೂ ಸೋಲದ ನಾನು ನಿನಗೆ ಹೇಗೆ ಸೋಲೊಪ್ಪಿದೆ
ತಿಳಿಯದಾಗಿದೆ ನನ್ನ ಸೋಲಿನ ಮೂಲ ತಿಳಿದರು ಮತ್ತೆ ಸೋಲುವೆ ನಾ

ಅತ್ತ ಇತ್ತ ಎತ್ತ ಹೋದರು ಎದುರಾಗುತಿದೆ ನಿನ್ನ ಪ್ರತಿಬಿಂಬವು
ಕೇಳುವೆ ಆ ದೇವನಲ್ಲಿ ನಿನ್ನನೆ ನನ್ನ ಮನದ ಮಹಾರಾಜನಾಗಿ...

28/2/2020

- Irayya Mathad

29 Feb 2020, 12:23 am
Download App from Playstore: