3.ಹಿತ ವಚನಗಳು.
ತಂದೆ--ತಾಯಿಯ ಸೇವೆ/ಗುರುಲಿಂಗ ಜಂಗಮರ ಸೇವೆ ನೀ ಮಾಡಿ ಪುನಿತನಾದೊಡೆ/ಸದ್ಗತಿ ದೊರಕುವುದು ನೋಡ ಶ್ರೀ ಷಡಕ್ಷರದೇವ//
ಆಸೆಯಿರಲಿ ಮನುಜ/ದುರಾಸೆ ಬೇಡ
ಅತಿಯಾಸೆ ನೀ ಪಟ್ಟಲ್ಲಿ/
ನಿರಾಸೆ ಕಟ್ಟಿಟ್ಟ ಬುತ್ತಿ ನೋಡ ಶ್ರೀ ಷಡಕ್ಷರದೇವ//
ಸತ್ಯದ ನಡೆಯಲಿ/ಶಿವನ ಸ್ಮರಿಸದ ಮನುಜಗೆ
ಮುಕ್ತಿಯ ದಾರಿ/
ದೊರಕದು ನೋಡ ಶ್ರೀ ಷಡಕ್ಷರದೇವ//
ಕಿದ್ವಾಯಿ ರಾಜಶೇಖರ್.
- Raj Raj
29 Feb 2020, 09:40 pm
Download App from Playstore: