ಅವಳೇ ಪ್ರೀತಿಯೇನ?

ನನ್ನ ಕತ್ತಲೆಯ ಬಾಳಲ್ಲಿ
ಹೊತ್ತಂದು ಹೊಂಬೆಳಕ ಹಚ್ಚಿಟ್ಟು
ಹೋದವಳ್ಯಾರ?॥॰॰॰॰

ಹಚ್ಚಿಟ್ಟ ಬೆಳಕಲ್ಲಿ ಭಿತ್ತಿಯ
ಬಚ್ಚಿಟ್ಟಿರಬಹುದೆಂದು ಹುಡುಕುತ್ತಲಿಹೆ
ನನ್ನೊಳಡಗಿದ ಅವಳ್ಯಾರ?॥॰॰॰॰

ನನ್ನ ತಬ್ಬಲಿ ಬದುಕಲ್ಲಿ
ಮಬ್ಬುಗತ್ತಲ ಕಪ್ಪುಮೋಡ ಕರಗಿಸಿ
ತಬ್ಬಿ ಮಳೆಬಿಲ್ಲಿಟ್ಟು ಹೋದವಳ್ಯಾರ?॥॰॰॰॰

ದಿಕ್ಕು ದೆಸೆ ತಿಳಿಯದಲ್ಲಿ
ಪ್ರೀತಿಕಡಲ ಹರಿಸಿ ದೋಣಿಮಾಡಿ
ದಡಕಚ್ಚಿ ಹೋದವಳ್ಯಾರ?॥॰॰॰॰

ತುಂಬಿದೆದೆಯ ಮಾತಮಲ್ಲಿ
ನಂಬಿಗೆ ಅಗೆದು ಮೊಗೆದಷ್ಟು ತುಂಬಿ
ನಗೆಚುಕ್ಕಿ ಆದವಳ್ಯಾರ?॥॰॰॰

ಹುಡುಕುತಿಹೆ ಏಕಾಂತದಲಿ
ಕುಳಿತು ಒಬ್ಬನೇ ಪಿಸುಗುಟ್ಟುತ
ಅವಳೇ ಪ್ರೀತಿಯೇನ?॥॰॰॰॰

- samna

01 Mar 2020, 07:17 pm
Download App from Playstore: