ಉಳಿಗಾಲವೆಲ್ಲಿ ?
ಜವಾಬ್ದಾರಿಗಳು ಬೆನ್ನೇರಿ ಬೇತಾಳನಂತೆ
ಕಾಡುತ್ತಿರುವಾಗ ಕನಸಿನ ಕೈ ಹಿಡಿವುದು
ಹೇಗೆ, ಪ್ರತೀ ಹೆಜ್ಜೆಗೂ ಹೊಸತೊಂದು
ಸವಾಲು ಉದ್ಭವಿಸಿದಾಗ ಉತ್ತರ
ಹುಡುಕುವುದಾದರೂ ಹೇಗೆ!
ಆಗಸದಿ ತಾರೆಗಳ ನೋಡಿ
ನಗುವಷ್ಟರಲ್ಲಿ ನಿಂತ ನೆಲವು ಕುಸಿದು
ಹೋದರೆ ಪಾದವೆಲ್ಲಿ ಇಡುವುದು
ಹೆಜ್ಜೆಗಳ ಭಾರ ಹೇಗೆ ಹೊರುವುದು!
ಆಸೆ ಆಕಾಂಕ್ಷೆಗಳಿಗೆ ತಾವಿಲ್ಲ ಇಲ್ಲಿ
ಕೋಪ ತಾಪಗಳಿಗೆ ಉಳಿವಿಲ್ಲ ಇಲ್ಲಿ
ಕಣ್ಣ ಹನಿಯ ಒರೆಸುವ ಕೈ ನಂಜಾಗಿ
ಮಡಿದಾಗ, ಮಿಡಿವ ಹೃದಯ ನಾಳೆಗಳ
ಚಿಂತೆಯಲ್ಲಿ ಬಡಿತವನ್ನು ಮರೆತಾಗ!
ನನ್ನವರೆನ್ನುವವರ್ಯಾರಿಲ್ಲಿ ನೊಂದ
ಮನಕೆ ಉಸಿರುಗಟ್ಟುವಂತೆ ಒಲವ
ಚಿತೆಗೆ ಬೆಂಕಿ ಹಚ್ಚಿದಲ್ಲಿ? ನಂಬಿಕೆಯ
ನೆಂಟಸ್ತಿಕೆ ಏತಕಿಲ್ಲಿ ಸ್ವಾರ್ಥದಿಂದ ಹಗ್ಗ
ಎಣೆದು ಕೊರಳಿಗಾಕಿ ಕೊಲ್ಲುವಲ್ಲಿ!
ಬಿಂಕದ ಬದುಕಿಗೂ ಸುಂಕ ಸಲ್ಲಿಸಬೇಕಾದರೆ ಉಳಿಗಾಲವೆಲ್ಲಿ ನೋವು ನಲಿವುಗಳ ನಿತ್ಯ ದೊಮ್ಮರಾಟದಲ್ಲಿ!!
- ಚುಕ್ಕಿ
01 Mar 2020, 10:18 pm
Download App from Playstore: