ಮಠದ ಹುಡುಗ್ರು
ದಿಟಬಾಳ ಅರ್ಥದ ಗೆಲುವ ಹರಸಿ
ಮಠಕೆ ಬಂದವರು ದಿಕ್ತಟ ಊರೂರ ದಾಟೀ॥॰॰
ಕಟ್ಟಳೆ ಮೀರದೆ ಕಟ್ಟುನಿಟ್ಟ ನಡೆಸಿ
ವಟವೃಕ್ಷ ನೆರಳಿಗೆ ತಳೆದವರು ಮೊಳಕೆನಾಟೀ॥॰॰
ಗುರು ಪಂಚಾಕ್ಷರಿ ಇನಕಿರಣದಲಿ
ಅರಳುಗಟ್ಟಿಸಿಕೊಂಡವರು ಎದೆಮೊಗ್ಗ ಕ್ಷಾರ॥॰॰
ಅರಿವೆಂಬ ಸತ್ಯ ಸಾಕ್ಷಾತ್ಕಾರದಲಿ
ಎರಗುತ ಪದತಲಕೆ ಕಂಡವರು ಸಂಸ್ಕಾರ ॥॰॰
ಕಟ್ಟಿಗೆಯ ಸೀಳಿ ಕುಟ್ಟಿಸಿ ಭತ್ತವನು
ಭಾರಡಕಿ ಉಣಬಡಿಸಿ ದಾಸೋಹ ಕೃಪಾಕರ॥॰॰
ಗಟ್ಟಿಗೊಳ್ಳತ ಗೈದವರು ಕಬ್ಜವನು
ಕುಪ್ಪಳಿಸಿ ಕುಣಿದದ್ದು ನೆನಪೀಗ ಹಿತಕರ॥॰॰
ರನ್ನದ ಕೆಳೆಯರ ಅನ್ನದ ಒಡೆಯರ
ಚೆನ್ನೇಶ ನೆಲೆವೀಡು ಎದೆಮನದ ಹೊನ್ನರಳಿ॥॰॰
ಜ್ಞಾನಹಸಿವನೀಗಿ ಬದುಕ ಕಟ್ಟಿತೆಲ್ಲರ
ಕೊನರಿಟ್ಟಿದೆ ಕಲ್ಮಠ ಚಂದ್ರಶೇಖರ ಜೊನ್ನರಳಿ॥॰॰
- samna
02 Mar 2020, 11:42 am
Download App from Playstore: