ನಿರ್ಲಕ್ಷದ ಶಿಕ್ಷೆ
ಯಾರು ಅರಿವರು ಈ ತಾತ್ಸಾರದ ನೋವನ್ನು
ನಾನೇನು ಅಪರಾಧ ಮಾಡಿದೆ ಈ ನಿರ್ಲಕ್ಷದ ಶಿಕ್ಷೆ
ಪಡೆಯಲು,
ಪಣ ತೋಟು ಊಳಿಗೆ ಮಾಡಿದರು ನಿನ್ನ
ಲಕ್ಷ ಮಾಡರು, ಕಷ್ಟಕೆ ನೇರವಾಗಿ ಹೆಗಲು ನೀಡಿದರು
ಕೊರತೆಗಳ ಕಾಣುವರು,
ಉಸಿರ ಹಂಚಿ ಜೀವ ನೀಡಿದ ಜೀವದಾತನೆ ನಿನ್ನ ಊಪೇಕ್ಷೇ ಮಾಡುವ ಬಾಳು ನರಕವೆ ಹೌದು,
ಆಸೆಯ ಮನದಿ ಸ್ನೇಹವ ಅಪೇಕ್ಷಿಸಿದೆ
ನನ್ನ ಅಸಡ್ಡೆ ಮಾಡಿದರು,
ವಸ್ತುಗಳ ಪ್ರೀತಿಸಿ ವ್ಯಕ್ತಿಗಳ ಉಪಯೋಗಿಸೊ ಕಟುಕರಾದರು ಇಂದಿನ ಜನರು,
ನಿಜ ಪ್ರೀತಿಯ ತೋರಿ ನಿಜ ಸ್ನೇಹವ ಕೋಟವನಿಗೆ
ಅನಾದರದ ಅನುರಾಗವೆ ಕೊಡುಗೆ.
ಕಿರಣ್ ಕ್ರೀಸ್
- Kris
03 Mar 2020, 07:50 am
Download App from Playstore: