ಗೋಡೆಗಳು
ಮನೆ ಮನಗಳ ನಡುವಿನ ಕಂಪೌಂಡ ಗೋಡೆಗಳು ಎತ್ತರಕ್ಕೇರುತ್ತೀವೆ
ಹೊಲ ಗದ್ದೆಗಳ ಬದುವಿನ ಮೇಲೆ ಜಾಲಿಗಿಡಗಳು ಸಾಲು ಹೆಚ್ಚುತಿವೆ
ಜಾತಿ ಜಾತಿ ಗಳ ನಡುವೆ ಧರ್ಮ ಧರ್ಮಗಳ ನಡುವೆ ಅಪನಂಬಿಕೆಯ ಅಟ್ಟಹಾಸ
ನದಿ, ಹಳ್ಳ, ಕೊಳ್ಳಗಳು ದಿಕ್ಕು ಕಾಣದೇ ದಿಕ್ಕೇಟ್ಟು ದಿಕ್ಕಾಪಾಲಾಗಿ ಹರಿಯುತಿವೆ
ಗೋಪುರ,ಗುಂಬಜ, ಮೀನಾರ ಗಳು ನೆಲದ ಕಡೆ ಮುಖ ಮಾಡಿವೆ
ಮುಖ ಚಹರೆಗಳ ಮೇಲೆ ಮುಖ ಮರೆ ಮಾಚುವ ಮುಖವಾಡಗಳ ವಿಕೃತ ನಗೆಯ ತಕತೈ
ಸ್ನೇಹ,ಪ್ರೀತಿ,ಪ್ರೇಮ, ಬಾಂಧವ್ಯಗಳ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತೀವೆ
ಹೃದಯ ಹೃದಯಗಳ ನಡುವೆ ಬೆಸೆಯುವ ಸೇತುವೆಗೆ ಬಿರುಕು ಹೆಚ್ಚುತಿದೆ.
- Siddugouda
03 Mar 2020, 12:25 pm
Download App from Playstore: