ಹನಿಗವನ

ಒಡನಾಡಿಗಳ ಸಹಿಸುವ
ಗುಣವಂತನೀತ
ಹೊಗಳಿಕೆ ತೆಗಳಿಕೆಗೆ
ತಲೆಕೆಡಿಸಿಕೊಳ್ಳದಾತ
ಅಲುಗಾಡದ ಮೇರು ಪರ್ವತ
ಬಸಂತ

ಅಡಿಯಿಡುವೆಡೆಯೆಲ್ಲ ಜಯ
ಸದಾ ಚಿಂತನೆಯಲ್ಲೆ ತನ್ಮಯ
ಎದುರಾಳಿಗೆ ಇವಳೆಂದರೆ ಭಯ
ಹೊಗಳಿಕೆಯೆ ಇವಳಿಗೆ ಅಭಯ
ಶ್ರೇಯ

ಬಳ್ಳಿಯಂತ ಚಂದ
ಸುಮತ ಮಕರಂದ
ಮೌನವೇ ಇವಳಿಗೆ ಅಂದ
ಬೃಂದ

ಮಾತಿನಲಿ ಸಿರಿವಂತ
ಬದಲಾಗದ ಮೇರು ಸಂತ
ಏರಿಳಿತವಿಲ್ಲದ ಪಂಡಿತ
ಹೇಮಂತ

ಜಗ್ಗದ ಕುಗ್ಗದ ಸರದಾರ
ಎಲ್ಲಿಯು ನಿಲ್ಲದ ಸವಾರ
ಅಂಜಿಕೆಯಿಲ್ಲದ ದೀರ
ನಾಮದಲ್ಲೆ ನಂಜನು ಹೊತ್ತ ಈಶ
ನಂಜುಡೇಶ

ಮನೆಯಲ್ಲಿ ಇವನೇ ಅಗ್ರಜ
ತರಗತಿಯಲಿ ಇವನಿದ್ದರೆ ಮಜ
ಹರಟೆ ಗುಂಪಿನ ರಾಜ
ಪೃಥ್ವಿ ರಾಜ

ಇವಳ ನಡೆ- ನುಡಿಯಲಿಲ್ಲ ಹುಸಿ
ಸದಾ ಮಾಡುವಳು ಕಲಿಕೆಗೆ ಕಸಿ
ಸರ್ವರ ಸೆಳೆವಳು ಸ್ನೇಹದ ಬಲೆ ಬೀಸಿ
ಬಿಳಿಯರೊಡನೆ ಸೆಣಸಿದಳು ಆ ಝಾನ್ಸಿ
ಪರಿಕ್ಷೆಯೊಡನೆ ಹೋರಾಡುತಿಹಳು ಈ ಝಾನ್ಸಿ

ತರಗತಿಯಲಿ ಇವನೇ ಕುಬ್ಜ
ಪಠ್ಯೇತರಗಳಲ್ಲಿ ಅಗ್ರಜ
ಪಡೆವನು ಅನಿಯಮಿತ ರಜಾ
ಗಣನೆಗಿಲ್ಲ ನೀಡುವ ಸಜಾ
ಹೊಳೆಯುವುದು ವದನಾರವಿಂದ
ಅರವಿಂದ

ಅಡಿಯಿಡುವೆಡೆಯೆಲ್ಲ ಶೀತ
ಗೈರಾಜರಿಗೆ ಚಿರಪರಿಚಿತ
ಸಾಧನೆಗೆ ಅಪರಿಚಿತ
ಅಂಜೂರದಂತ ಲಿಖಿತ
ಋಷಿಯಂತೆ ನಿಶ್ಚಿಂತ
ರಿಷಿತ

ಎಲ್ಲೆಲ್ಲಿಯು ಪಡೆವಳು ಮಾನ್ಯ
ಎಂದೆಂದಿಗು ಇವಳು ಅನನ್ಯ
ಸದಾ ಕಾಯುವಳು ಗೌಪ್ಯತೆಯನ್ನ
ಚೈತನ್ಯ

ಏನೇನು ಅರಿಯದ ಕೂಸು
ಮೂಗಿನ ಮೇಲೆಯೆ ಮುನಿಸು
ಸದಾ ಮಾಡುವಳು ಕಸರತ್ತು
ಪಡೆಯಲು ಯಶಸ್ಸು
ಚೈತನ್ಯ

ನಡೆಯಲಿ ಸೌಮ್ಯವತಿ
ನುಡಿಯಲಿ ಪರಿಣಿತಿ
ನೋಟದಲಿ ಗಂಭೀರವತಿ
ಹೊಂದಿರುವಳು ಸಾಧನೆಗೆ ಪರಿಮಿತಿ
ಶ್ರಾವಂತಿ

ನಗುಮೊಗದ ಸುಂದರಿ
ಹಡೆದವರ ಮುದ್ದಿನ ಕುವರಿ
ಹೊರಟಿಹಳು ಸಾಧನೆಯ ಸವಾರಿ
ಇವಳು ತರಗತಿಯ ಉಷ
ಅನುಷ

ಇವಳು ಸದ್ಗುಣಗಳ ಕುಂಚ
ಮುನಿಸಿ ಎಲ್ಲೋ ಕೊಂಚ
ಕಿರುನಗೆಯಿಂದಲೆ
ಸೆಳೆವಳು ಸರ್ವರ ಮನ
ಕಾಂಚನ

ನಡೆನುಡಿಯಲಿ ಸದಾ ಅನೃತ
ಹಡೆದವರ ಮುದ್ದಿನ ಸುತ
ಹೊಂದಿರುವನು ಸುಂದರ ವದನ
ಚಂದನ

ಅಭಿನಂದನೆಗೆ ದೂರ
ನೋಟದಲಿ ಸುಂದರ
ಮನೆಯವರ ಮುದ್ದಿನ ಕಲಶ
ಅಭಿಲಾಷ

ಸರ್ವಕು ಇವಳೇ ಆಧಾರ
ನೋಡಲಿವಳು ಬಲು ಸಪೂರ
ಅಡಿಗಡಿಗೆ ಅರಸುವಳು ಕಾರ್ಯ
ಸಹಪಾಠಿಗಳೆ ಇವಳ ಧೈರ್ಯ
ಐಶ್ವರ್ಯ

ಪರ್ವತವೇರುವ ಆಸೆ
ಪ್ರಯತ್ನ ಚೇತನ ಮೂರು ತಾಸೆ
ಸಾಧನೆ ಕೇವಲ ಅರ್ಧಾಂಶ
ತರಗತಿಯಲಿ ಇವನೆ ಭಾಷ
ಲೋಕೇಶ್

ಚಂಚಲವಾದ ಮನಸ್ಸು
ಪೂರೈಸಲು ತಂದೆಯ ಕನಸು
ಶಿಕ್ಷಣವೇ ಇವನ ಅಸ್ತ್ರ
ಹಿಡಿಯಲೊಂದಿನ ಶಸ್ತ್ರಾಸ್ತ್ರ
ತಂದೆಯ ಮೆಚ್ಚಿನ ಸನ್
ನಿತಿನ್

ಬದಲಾಗದ ರೀತಿ ನೀತಿ
ನೆನೆವರೆದೆಯಲಿ ಸೃಷ್ಟಿ ಭೀತಿ
ಮರೆಯಲಾಗದ ಮೂರುತಿ
ಪ್ರೀತಿ

ನಡೆನುಡಿಯಲಿ ಸೌಮ್ಯ
ಅದೃಷ್ಟವೆ ಅಗಮ್ಯ
ಸಾಧನೆಯಲಿ ಅಗಣ್ಯ
ಹಡೆದವರ ಪುಣ್ಯ
ನವ್ಯ

ಇವನು ಆರಡಿಯ ಗನ್
ಹಿಡಿದಿಹನು ಮೂರಿಂಚಿನ ಪೆನ್
ಪರಿಗಣಿಸನು ಯಾವುದೆ ಕಾನೂನ್
ಸಾಧನೆಯಲಿ ಸದಾ ಮೂನ್
ನಿತಿನ್

ಸದಾ ಪಾಲಿಸುವನು ಮೌನ
ಗಳಿಸನು ಒಂದಿಷ್ಟು ಜ್ಞಾನ
ಇವನ ಗಣನೆಗಿಲ್ಲ ವಿಜ್ಞಾನ
ದಿನವು ಮಾಡುತ ಭೋಜನ
ಅಡಿಗಡಿಗೆ ತುಂಬಿದೆ ಅಚೇತನ
ಚೇತನ

ನಾಮದಲ್ಲಿದೆ ಸಿರಿ
ಸುಂದರ ಕೇಶಸಿರಿ
ಸುಂದರವಾದ ಸ್ತ್ರೀ
ಇವಳಿಗೆ ಕಂಬನಿ ಫ್ರೀ
ಚಂದುಶ್ರಿ

- ಶಕುಂತಲಾ

03 Mar 2020, 06:25 pm
Download App from Playstore: