ನೇಗಿಲ ಜೀವಿ
ಬಿಸಿಲಗ್ನಿ ಸುರಿವ ಸರಿಗೇ
ಬಸಿತಿರೆ ಬೆವರು ಬಿಡನೀತ ಉಳಲಾ
ಉಸಿರ ಬಸಿದು ಧರೆ ಉಡುಗೇ
ಹಸಿರಿಸಿ ನಿಲಿಪ ತೆನೆದೂಗ ಮುಗಿಲಾ
ಬೆಳೆ ಕೊಚ್ಚಿ ಹರಿಯೆ ಝಳಕ ಒ
ಣಲಿಟ್ಟು ಸುಡೆ ಚಿಂತೆಬೀಳದೆ ಕುಳದ ಅಡಿಯಾ
ನೆಲನಂಬಿ ಪುನರಪಿ ದುಡಿದೆ
ಕಳೆಯುತ ಜಗದ ಹಸಿವ ನೇಗಿಲಯೋಗಿ ತಾನಾ
ಮಳೆಗರೆಯೆ ಮುಗಿಲ್ ಒಳೆರ್ದೆ
ಯೊಳಾವದೋ ಚೇತನಂ ನಿನಯ ಕುಣಿಸುವುದಾ
ಎಳೆಕರುವಿನೋಲ್ ಖುಷಿಕಡಲ
ಇಳೆನಗೆ ಕೊನರ ನೆಲಧಾತ್ರಿ ಕಣ್ಗಾಣಿಪುದಾ
ಧಾರೆಜಲ ಮೋಡ ಸುರಿಯೇ
ಬೆರೆತಿರೆ ಹಸಿಗೆಹಸಿ ಬೇರ ಪಚ್ಚೆಫಸಲನಾ
ಹರುಷವನೆಂತು ನುಡಿವುದು ಹ
ಹಸಿರರಸ ಕಾಯಕದ ಜೀವ ಕಟ್ಟಿಪಕನಸಾ
- samna
04 Mar 2020, 03:16 pm
Download App from Playstore: