ಅನಿಸಿಕೆ

ಪಂಡಿತ-ಪಾಮರರ
ಸಂಗಮ ತಾಣ
ಸರಿಗಮಪ ಸೀಸನ್ ೧೭ರ
ಸಂಗೀತ ಸಂಸ್ಥಾನ

ಹೊಸ ಚಿಗುರು -ಹಳೆಬೇರು
ಕನ್ನಡ ಕಗ್ಗದ ಮುತ್ತು
ಹಂಸಲೇಖ- ಅರ್ಜುನಜನ್ಯರು
ಕನ್ನಡ ಸರಿಗಮಪದ ಸ್ವತ್ತು

ವಿಖ್ಯಾತ ಜಯಹೋ ಮೊಳಗಿಸಿದ
ಕಂಚಿನ ಕಂಠ;ಕನ್ನಡಿಗರನ್ನ
ಜೇನ ಹನಿಯಲಿ ಮುಳುಗಿಸಿದ
ಮಧುರ ಕಂಠಗಳ ಸಮ್ಮಿಲನ

ನಾಕು ತಂತಿಯ ಮೀಟಿದ ಬೇಂದ್ರೆ
ಈ ನಾಲ್ವರಲ್ಲೆ ನೆಲೆಸವ್ರೆ
ಬವಣೆ ನೀಗಿಸಿ ,ಬಾಂದವ್ಯಸುಜ್ಞಾನವ
ಕರುನಾಡಲ್ಲಿ ಬೆಳೆಸ್ತಾವ್ರೆ

ಅಂದ-ಚಂದದ ವಯ್ಯಾರಿ
ಈ ಆಸ್ಥಾನದ ಸುಕುಮಾರಿ
ಅರ್ಜುನ್ ಜನ್ಯರ ಮದನಾರಿ
ಸರಿಗಮಪದ ನಿರೂಪಕಿ ಅನುಶ್ರೀ

ಮುದ್ದಣ್ಣ-ಮನೊರಮೆಯರ ಸಲ್ಲಾಪ;
ಏರಿ ಅಶ್ವಮೇಧಯಾಗದ ಸವಾರಿ
ಅರ್ಜುನ್ ಜನ್ಯ-ಅನುಶ್ರೀ ರ ಸಲ್ಲಾಪ;
ಏರಿ ಸರಿಗಮಪ ಸೀಸನ್ ೧೭ ರ ಅಂಬಾರಿ

ಸರಿಗಮಪ ವೇದಿಕೆಯೇರುವ ಆಸೆ
ಇಂದಿಗೂ ನನಗದು ಕನಸೆ
ರಾಗ,ತಾಳ ಲಯಗಳ ಅರಿವಿಲ್ಲದ ಅಬಲೆ
ಕಲಿಕೆಯ ಬಯಕೆ ಆಂತರ್ಯದಿ ಅವಿತಿದೆ



ಶಾರದ

- ಶಕುಂತಲಾ

04 Mar 2020, 05:27 pm
Download App from Playstore: