ಪ್ರೀತಿತೋರಿದ ತಪ್ಪಿಗೆ

ಮುದ್ದಾಡಿದ ಮನಸ್ಸ
ಮೃಧುಗೊಳಿಸಿ ಅಟ್ಟೆಯ ಮಾಡಿ..
ಪ್ರೀತಿತೋರಿದ ಕರುಳಾ
ಒಸೆದು ಉಂಗುಷ್ಠದ ರೆಕ್ಕೆಮಾಡಿ..

ಬಸಿನೆತ್ತರ ಬಣ್ಣಕ್ಕೆಂದು
ಉಜ್ಜಿ ಉಜ್ಜಿ ಗಟ್ಟೆಂದು ಪಾಲೀಸಮಾಡಿ..
ಉಸಿರು ಸದ್ದಿಡತದೆಂದು
ಮೊನಚುಮೂಳೆ ಜಡಿದು ಬಿಗಿಮಾಡಿ..

ಎದೆಇದು ಮಿಡಿವದೆಂದು
ಬಾರಮೇಲ ಷೋಕಿಗೆ ಚಿತ್ರಹೂ ಮಾಡಿ..
ಮಾಂಸಖಂಡಗಳ ಮೀನ
ಒತ್ತಬಾರದೆಂದು ಹತ್ತಿಯಂತೆ ಹರಡಿ..

ಒಲವಿಗೆ ಆದವರ ಬದಕೆ
ಚಪ್ಪಟೆ ಎಬ್ಬಿಸಿ ಬಿಟ್ಟು ಬೂದಿದೂಳ..
ಮಾರಿಯರು ನೆಡೆದರೊ
ಮೆಟ್ಟುತ ಹೊರುವ ಚಪ್ಪಲಿಗಳ

- samna

05 Mar 2020, 07:22 pm
Download App from Playstore: