ಅಳೋ ನೋವಿಗೆ ನಗೋ ಮದ್ದಿದೆ

ಅಳೋ ನೋವಿಗೆ
ನಗೋ ಮದ್ದಿದೆ!!
ನಿನ್ನ ಅಳು ಎಂಬ
ಹೊಳೆ ಬತ್ತಿ ಹಸಿರಾಗಿದೆ!!
ನೀನು ನಕ್ಕಾಗ
ನಕ್ಷತ್ರ ಹೊಳೆದಂತಿದೆ!!
ಖುಷಿ ಎಂಬ ಮೆರವಣಿಗೆ
ಹೊರಟಾಗಿದೆ!!
ಬಾಳೊಂದು ಬಂಗಾರದ
ಗಣಿಯಾಗಿದೆ!!
ಸಂತಸದ ಮೊಗ್ಗರಳಿ
ಹೂವಾಗಿದೆ!!
ಕಣ್ಣೀರು ಹೊಳೆ ಹೊಳೆವ
ಮುತ್ತಾಗಿದೆ!!
ಅಳೋ ನೋವಿಗೆ
ನಗೋ ಮದ್ದಿದೆ!!

- ಪಿ.ಜಿ.ಜ್ಯೋತಿ

07 Mar 2020, 07:35 am
Download App from Playstore: