ಕೋಗಿಲೆ
ವಸಂತ ಋತುವಿನಲಿ
ನಿನ್ನ ದನಿಯ ಕೇಳುತ ಮರೆತೆನು
ನಾ ನನ್ನನೆ - ಓ ಕೋಗಿಲೆ...
ಹೋಲಿಕೆಯಲಿ ನೀ ನೋಡಲು ಕಾಕನಂತಿದ್ದರೂ,
ನಿನ್ನ ದನಿಯೇ ಅತಿಮಧುರ...
ಮಾವಿನ ಚಿಗುರ ತಿಂದು ನೆಲೆಸಿರುವೆ
ನೀ ಕಾನನದಲ್ಲಿ...
ನಿನ್ನ ದನಿಗೆ ಮರುಳಾಗದಿಹನಿಲ್ಲ
ಈ ಜಗದಲ್ಲಿ....
ಏನಿದ್ದರೂ ಸಾಕಿಲ್ಲವೆಂಬಂತೆ ಬದುಕಿಹೆವು ನಾವಿಲ್ಲಿ....
ನೀಡು ನಿನ್ನ ಸೌಮ್ಯತೆ
ಈ ಜನರಲ್ಲಿ....
ನಿನಗಾರು ಸಾಟಿಯೇ ಕೋಗಿಲೆ...
ನಿನಗೆ ನೀನೇ
ಸಾಟಿಯು - ಓ ಕೋಗಿಲೆ...
ಬಂದೊಮ್ಮೆ
ಹಾಡೇ - ಓ ಕೋಗಿಲೆ.....
- Rohit
03 Jun 2016, 05:12 pm
Download App from Playstore: