ವಿರಹ ಗೀತೆ
ಮುಂಜಾನೆಯ ತಂಪಿನಲ್ಲಿ
ಮುಸ್ಸಂಜೆಯ ಮಾತಿನಲ್ಲಿ
ಮೋಡವೆ ಇರದ ಗಗನ
ಮಳೆಯನ್ನು ಸುರಿಸಬಹುದು
ಜೀವವೇ ಹೀರಿದ ಹೃದಯ
ಪ್ರೀತಿಯನ್ನು ಆಶ್ರಯಿಸುವ ಓ ಮನುಜ
ವಿರಹ ಗೀತೆಯನ್ನು
ರಾಗವಾಗಿ ಹಾಡಬಹುದು
ಬಿರುಕು ಬೀಳದ ಮುಗ್ಧವಾದ
ಮನಸ್ಸುಗಳೊತ್ತು ಜೀವನದಲ್ಲಿ
ಬಡತನದಲ್ಲಿ ಬೆಂದ ಹೃದಯ
ಬೂದಿ ಆಗದೇ ಕರಿ ಇದ್ದಿಲು ಆಗಿ ಉಳಿಯಬಹುದು
ಬಂಧನಗಳು ಬೇಲಿ ಕೊರಳಿಗೆ
ಹಗ್ಗವಾಗಿ ಬಿಗಿಯುವ ಮುನ್ನವೆ
ಪರಿಚಯವಾದರೂ ಈ ಕಣ್ಣಲ್ಲಿ ನೀರಾಗಿ
ಕಣ್ಮರೆಯಾದರೂ ಕಾಲಕ್ಕೆ ಬದ್ದರಾಗಿ
ವಿಧಿವಶರಾದರು............
- bindhu
07 Mar 2020, 03:17 pm
Download App from Playstore: