ಕೀರ್ತಿ ವರ್ಣನೆ
ಆ ನಿನ್ನ ಕೋಮಲವಾದ ಕೇಶರಾಶಿ ನೋಡು ನೋಡುತ್ತಲೇ ನಾ ನಿನ್ನ ಮುಡಿಗೆ ಹೂ ಅದೇ.!!
ನಿನ್ನ ಆಕಾಶವೆಂಬ ರೂಪದಲ್ಲಿ ನಾ ನಕ್ಷತ್ರವಾಗುವ ಹಂಬಲ..!
ಆ ನಿನ್ನ ಕನ್ನಡಿಯಲ್ಲಿ ನಾ ಬಿಂಬಿಸುವ ಹಂಬಲ.!!
ಆ ನಿನ್ನ ಕಣ್ ನೋಟ ನಾನ್ ನಾನು ಮತ್ತೆ ಮತ್ತೆ ನೋಡುವಂತೆ ಮಾಡಿತು..!!
ಆ ನಿನ್ನ ಕಿವಿ ಓಲೆಗಳಿಗೆ ನಿನ್ನಿಂದಲೇ ಹೊಳಪು ಅ ಹೊಳಪಿಗೆ ಮನಸೋತೆ.!!
ನಿನ್ನ ಇಂಪಾದ ಸ್ವರ ಕೇಳುವ ಕಾತುರನಾಗಿದೆನೆ.!!
ನಿನ್ನ ಕಣ್ ರೆಪ್ಪೆಗಳು ನಿಸರ್ಗದ ಚೆಲುವೆಯಂತೆ ಕಂಗೊಳಿಸುತ್ತಿವೆ.!!
ಆ ನಿನ್ನ ನಗು ಬೆಳದಿಂಗಳ ಚಂದ್ರನ ಹೊಳಪಿನಂತೆ ಕಂಗೊಳಿಸುತ್ತಿವೆ..!!
ಆ ನಿನ್ನ ತಿಲಕವು ನಿಸರ್ಗದಲ್ಲಿ ಉದಯಿಸುವ ಸೂರ್ಯನಂತೆ ಕಂಗೊಳಿಸುತ್ತಿದೆ..!!
ಆ ನಿನ್ನ ನಿರ್ಮಲವಾದ ಹಸ್ತದಲ್ಲಿ ಪುಸ್ತಕ ನಾನಾಗಲೇ..!!
ನಿನ್ನ ಕಾಲ್ಗೆಜ್ಜೆ ಸಪ್ಪಳ ಕೇಳುವ ಹಂಬಲ..!!
ನಾ ಕೋಡುವ ಉಡುಗೊರೆ ಅ ಕಾಲ್ಗೆಜ್ಜೆ....!!!
ನಾ ನಿನ್ನ ನೋಡಿ ಮತ್ತೊಮ್ಮೆ ವರ್ಣಕನಾದೆ..!!
*ವಿಕೆ*
- Vasanth Kumar.G.H
07 Mar 2020, 03:25 pm
Download App from Playstore: