ವರದಕ್ಷಿಣೆ ಒಂದು ಭಿಕ್ಷಾಟನೆ

ತಿಂಗಳು ಹೊತ್ತಲು ಅಮ್ಮ
ನನ್ನ ಬರುವಿಕೆಗೆ ಕಾದರು ಎಲ್ಲ
ನಾ ಬಂದೆ ಧರೆಗೆ ಸಂಭ್ರಮದಿ
ಅಂದೆಲ್ಲರ ಮನದಲಿ ಹಬ್ಬವೋ ಹಬ್ಬ

ಕಾದು ಕುಳಿತಿರುವರೆಲ್ಲಾ
ಯುವರಾಜ ಬರುವನೆಂದು
ಎಲ್ಲವ ಹುಸಿಗೊಳಿಸಿ
ನಾ ಬಂದೆ ಹೆಣ್ಣಾಗಿ

ಬೆಳೆದು ಬಂದೆ ನಾ ಕೌಮಾರಕ್ಕೆ
ತೊಡಗಿದರು ಹುಡುಕಲು ಕುಮಾರನನ್ನು
ಹುಡುಕಿ ಹುಡುಕಿ ಸಾಕಾಯಿತು ಅವರಿಗೆ
ವರದಕ್ಷಿಣೆ ವಿರೋಧಿ ವರನನ್ನು

ಕೊನೆಗೂ ಲಭಿಸಿದನೊಬ್ಬ ವರ
ಪಡೆದ ಒಂದಿಷ್ಟು ಭಿಕ್ಷೆ
ಮುಗಿಸಿ ಶುರುವಾಯಿತು ಶಿಕ್ಷೆ
ನನ್ನ ಅಂತ್ಯದಲ್ಲೇ ಮುಗಿಯಿತು ಲಕ್ಷ್ಯ

- siyab

04 Jun 2016, 12:15 am
Download App from Playstore: