ನೀ ಬರುವ ದಾರಿಯಲಿ

ಎದೆಬಾಗಿಲಲಿ ಕಟ್ಟಿ ತೋರಣತಳಿರ
ಮುದನೀರ ಎದೆಅಂಗಳಕ ಚೆಲ್ಲೀ...
ಕಸನೆಲ್ಲ ಗುಡಿಸಿ ತಿದ್ದಿ ಮುಂಗುರುಳ
ಕಾದಿದ್ದೇನೆ ಹೊಯ್ದು  ರಂಗವಲ್ಲೀ...

ನೆಡೆದ ಹೆಜ್ಜೆಗಳ ಮೇಲೆ ಹೆಜ್ಜೆಇರಿಸಿ
ತುಳಿದಿದ್ದೇನೆ ಕನಸಿನ ಏಳಪದೀ..
ಬರುವದಾರಿಗೆ ಕಣ್ಣದಿಟ್ಟಿಯ ಹರಿಸಿ
ಕಾದಿದ್ದೇನೆ ಇಂಗುತ ಜೀವನದೀ...

ತನುಮುಗಿಲಲಿ ಕಲ್ಪವೃಕ್ಷ ನಾಟಿ
ನೆನಪಚಂದ್ರಮ ಇಣಕಿಹ ಕಾಡುತ..
ಬಯಕೆಗುದುರೆಯ ಮುರಿದು ಕಾಲ
ಕಾದಿದ್ದೇನೆ ಒಳಗೊಳಗ ಸುಡತ...

ಕೊರೆವ ತಂಡಿಗಾಳಿಗೆ ಹರೆಯ ತುಡಿದು
ಇರುಳ ಕಪ್ಪು ಕವಿದು ನುಂಗುತಲೀ..
ಕಿರುಹಣತೆ  ಬೆಳಗ ಮೊಗದಿ ಮುಡಿದು
ಮರುಳಿಡಿದು ಕಾದಿಹೆ ಬಾಳತಮದಲಿ...

- samna

09 Mar 2020, 08:00 pm
Download App from Playstore: