ಹ್ಯಾಂಗ ಮರೆಯಲ್ಲಿ ನಾ ಚೆಲ್ವಿ ನಿನ್ನ

ಹ್ಯಾಂಗ ಮರೆಯಲ್ಲಿ ನಾ ಚೆಲ್ವಿ ನಿನ್ನ
ಒಮ್ಯಾರ ಹೇಳೆ ನನ್ನ ಒಡತಿ ಅದ್ಯಾಂಗಂತ?
ಒಂದು ಮಾತಾಗ ಮರಿ ಅಂತೀಯಾ ನನ್ನ
ಬಾರೀ ದೊಡ್ ಮಂದಿ ಆದಿ ನೀ ಈಗ
ಇನ್ಯಕಾ ಈ ಹೈದ ನಿನ್ನ ಜೊತೆಯಾಗ ಅಲ್ಲಾ?


ಹೇ ಕೇಳೇ ಒಡತಿ ನೀಯ್ಯಾರಾ, ನಾಯ್ಯಾರ
ಅಂತಿದ್ವಿ ಆಗ ನೆನಪಾಯ್ತಿ ನಿಂಗ ಚೆಲ್ವಿ
ಆಮ್ಯಾಕ ನೀ ಏನಂದಿ ಮರೆತಾ, ಮಾರಾಯ್ತಿ?
ನೀನೇ ನನ್ ಉಸಿರು ನನ್ ಒಡೆಯ ನೀ
ನಾ ಎಂದು ಬಿಡಲ್ಲ ನಿನ್ನ ಈ ಜನುಮದಾಗ
ಗ್ಯಪ್ತಿ ಬಂತಾ ನಿನ್ ಮಾತು ಒಸಿ ಮಾತಾಡು


ಅಂಗೆಲ್ಲಾ ಹೇಳಿ ಇಪ್ಪಾಟಿ ಪೀರುತಿ ಕೊಟ್ಟಿ
ನೀ ಮರಿ ಅಂತಿ ಎಷ್ಟ್ ದಪ ಹೇಳುದ್ರು ನೀ
ಕೇಳಕಿಲ್ಲಾ ನಾ ಹೋಗ್ ಹೋಗ್ ಅಟ್ಟಿಗೆ
ಮರಿಯಾಕ ನಾ ನೀ ಅಲ್ಲಾ ನನ್ನೊಡತಿ
ಈ ಜನುಮಕ ನೀನೇ ನನ್ನ ಒಡತಿ
ನೀ ಏನ್ನಾರ ಹೇಳು ನಾ ಕೇಳೀನಿ ಅಂತ ತಿಳಿಬೇಡ



ಹ್ಯಾಂಗ ಮರೆಯಲ್ಲಿ ನಾ ಚೆಲ್ವಿ ನಿನ್ನ
ಒಮ್ಯಾರ ಹೇಳೆ ನನ್ನ ಒಡತಿ ಅದ್ಯಾಂಗಂತ





- ಹಂಸ ಕುಲಾಲ್✍️✍️✍️



ಮರೆತು ಬಿಡು ನನ್ನ ನೀ ಎಂದು ಹೇಳಿದ ಅವಳ ನುಡಿಗೆ ಅವನ ಮರು ಉತ್ತರ.

ಜಾನಪದ ಶೈಲಿ ಪ್ರಯತ್ನಿಸುವ ಹಂಬಲ ನನ್ನಲ್ಲಿ ಹೆಚ್ಚಾಯಿತು. ಆಗಾಗಿ ಈ ಪ್ರಯತ್ನ.
ನಿಮ್ಮ ಅಭಿಪ್ರಾಯ ತಿಳಿಸಿ.

- ಹಂಸವೇಣಿ

10 Mar 2020, 02:13 pm
Download App from Playstore: